ಎಸ್‌ಪಿ ಕಚೇರಿಗೆ ಯೂತ್ ಲೀಗ್ ಮಾರ್ಚ್

ಕಾಸರಗೋಡು: ರಾಜ್ಯ ಗೃಹ ಖಾತೆಯ ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ  ಕೇಳಿಬಂ ದಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬ ಬೇಡಿಕೆ ಮುಂದಿರಿಸಿ ಯೂತ್‌ಲೀಗ್‌ನ ಜಿಲ್ಲಾ ಸಮಿತಿ ನೇತೃತ್ವದಲ್ಲಿ  ನಿನ್ನೆ ಜಿಲ್ಲಾ  ವರಿಷ್ಠ ಪೊಲೀಸ್ ಅಧಿಕಾರಿ ಕಚೇರಿಗೆ ಮಾರ್ಚ್ ನಡೆಸಲಾಯಿತು.

ಎಸ್.ಪಿ  ಕಚೇರಿ ಬಳಿಯ ರಸ್ತೆಯಲ್ಲಿ  ನಿರ್ಮಿಸಿದ್ದ ಪೊಲೀಸ್ ಬಾರಿಕೇಡ್ ಗಳನ್ನು  ಪ್ರತಿಭಟನೆಗಾರರು ದೂಡಿ ಹಾಕಲೆತ್ನಿಸಿದಾಗ ಅವರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿ ಸಿದರು. ಈ ವೇಳೆ ಅಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ವಾತಾವರಣ ಸೃಷ್ಟಿಯಾ ಯಿತು.  ಶಾಸಕ ಎನ್.ಎ. ನೆಲ್ಲಿಕುನ್ನು ಮಾರ್ಚ್ ಉದ್ಘಾಟಿಸಿದರು.  ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು, ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೀರ್ ಆಸಿಫ್, ಶಾಸಕ ಎ.ಕೆ.ಎಂ. ಅಶ್ರಫ್, ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು, ಕಾರ್ಯದರ್ಶಿ ನ್ಯಾಯವಾದಿ ಫಾತಿಮಾ ತಹ್‌ಲಿಯಾ, ಲೀಗ್ ಜಿಲ್ಲಾ ಕೋಶಾಧಿಕಾರಿ ಪಿ.ಎಂ. ಮುನೀರ್ ಹಾಜಿ, ಹ್ಯಾರಿಸ್, ಚೂರಿ, ಟಿ.ಡಿ. ಕಬೀರ್, ಯೂಸಫ್ ಉಳ್ವಾರ್, ಎಂ.ಬಿ. ಶಾನವಾಸ್ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page