ಎಸ್‌ಸಿ, ಎಸ್‌ಟಿ ಸಮುದಾಯವನ್ನು ಅವಗಣಿಸಿದ ದೇಲಂಪಾಡಿ ಪಂಚಾಯತ್ ಆಡಳಿತ ಸಮಿತಿ-ವಿ.ಕೆ. ಸಜೀವನ್ ಆರೋಪ
ಅಡೂರು: ದೇಲಂಪಾಡಿ ಪಂಚಾ ಯತ್‌ನ ಎಸ್‌ಸಿ, ಎಸ್‌ಟಿ ಸಮುದಾ ಯವನ್ನು ಆಡಳಿತ ಸಮಿತಿ ಅವಗಣಿಸಿ ದೆಯೆಂದು ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ವಿ.ಕೆ. ಸಜೀವನ್ ಆರೋಪಿಸಿದರು. ಸತತವಾಗಿ ಎರಡು ದಶಕಗಳ ಕಾಲ ಆಡಳಿತ ನಡೆಸಿದ ಸಿಪಿಎಂಗೆ ಎಸ್‌ಸಿ, ಎಸ್‌ಟಿ ವಲಯ ದಲ್ಲಿ ಅಭಿವೃದ್ಧಿ ಉಂಟು ಮಾಡಲು ಸಾಧ್ಯವಾಗಲಿಲ್ಲ. ಹಿಂದುಳಿದ ವಿಭಾಗಕ್ಕೆ ನೀಡಬೇಕಾದ ಮೊತ್ತವನ್ನು ಇತರ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತಿದೆ. ಹಾನಿಗೊಂಡ ರಸ್ತೆಗಳನ್ನು ಕೂಡ ದುರಸ್ತಿ ಪಡಿಸಲು ಆಡಳಿತ ನಡೆಸುವವರು ಸಿದ್ಧರಾಗುತ್ತಿಲ್ಲವೆಂದು ಅವರು ಅಪಾದಿಸಿದರು. ಬಿಜೆಪಿ ಅಡೂರು ಏರಿಯಾ ಸಮಿತಿ ನೇತೃತ್ವದಲ್ಲಿ ಪಂಚಾಯತ್‌ಗೆ ನಡೆಸಿದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಆಸ್ಪತ್ರೆಗಳಲ್ಲಿ ಡಾಕ್ಟರ್ ಇಲ್ಲದೆ ತಿಂಗಳುಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲವೆಂದು ಅವರು ದೂರಿದರು. ಏರಿಯಾ ಸಮಿತಿ ಅಧ್ಯಕ್ಷ ರಾಜೇಶ್ ಪಾಂಡಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ನೇಶನಲ್ ಕೌನ್ಸಿಲ್ ಸದಸ್ಯೆ ಪ್ರಮೀಳಾ ಸಿ. ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ, ಅಡೂರು ಏರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಅಡೂರು, ಏರಿಯಾ ಸಮಿತಿ ಕಾರ್ಯದರ್ಶಿ ನಾರಾಯಣನ್, ರಾಜು ಕೋರಿಕಂಡಂ ಮಾತನಾಡಿದರು.