ಎ.ಡಿ.ಎಂ ನವೀನ್‌ಬಾಬು ಆತ್ಮಹತ್ಯೆ: ಕಣ್ಣೂರು ಜಿಲ್ಲಾ ಪಂ. ಅಧ್ಯಕ್ಷೆ ಸ್ಥಾನದಿಂದ ದಿವ್ಯಾ ಹೊರಕ್ಕೆ; ಆತ್ಮಹತ್ಯೆ ಪ್ರೇರಣೆ ಪ್ರಕರಣ ದಾಖಲು
ಕಣ್ಣೂರು: ಕಣ್ಣೂರು ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ (ಎಡಿಎಂ) ನವೀನ್‌ಬಾಬುರ ಆತ್ಮಹತ್ಯೆಗೆ ಸಂಬಂಧಿಸಿ ಸ್ವಪಕ್ಷ ಸಹಿತ ವಿಪಕ್ಷಗಳ ಒತ್ತಡಕ್ಕೆ ಮಣಿದು ಪಿ.ಪಿ. ದಿವ್ಯಾರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಸಿಪಿಎಂ ತೆರವುಗೊಳಿಸಿದೆ.
ಇದರ ಬೆನ್ನಲ್ಲೇ ದಿವ್ಯಾರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೧೦೮ರ ಪ್ರಕಾರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣವನ್ನು ದಾಖಲಿಸಿಕೊಂ ಡಿದ್ದಾರೆ. ಇದು ಹತ್ತು ವರ್ಷ ತನಕ ಶಿಕ್ಷೆ ಲಭಿಸುವ ಅಪರಾಧ ಕೃತ್ಯವಾಗಿದೆ. ಎಡಿಎಂ ನವೀನ್‌ಬಾಬುರ ಆತ್ಮಹತ್ಯೆಗೆ ಸಂಬಂಧಿಸಿ ಅವರ ಸಹೋದರ ಕೆ. ಪ್ರವೀಣ್‌ಬಾಬು ಪೊಲೀಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಕಾನೂನು ಸಲಹೆ ಪಡೆದು ಅದರ ಆಧಾರದಲ್ಲಿ ದಿವ್ಯಾ ವಿರುದ್ಧ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿ.ಪಿ. ದಿವ್ಯಾ ರಾಜೀನಾಮೆ ನೀಡಿದುದರಿಂದ ತೆರವುಗೊಂಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಥಾನಕ್ಕೆ ನ್ಯಾಂiiವಾದಿ ರತ್ನಕುಮಾರಿಯವರ ಹೆಸರನ್ನು ಸಿಪಿಎಂ ಕಣ್ಣೂರು ಜಿಲ್ಲಾ ಸೆಕ್ರೆಟರಿಯೇಟ್ ಸೂಚಿಸಿದೆ.
ಎಡಿಎಂ ಆತ್ಮಹತ್ಯೆಗೆ ಕಾರಣವಾದ ದಿವ್ಯಾರ ವರ್ತನೆಗೆ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಖಾರವಾದ ರೀತಿಯ ಪ್ರತಿಕ್ರಿಯೆ ನೀಡಿದೆ. ಮಾತ್ರವಲ್ಲ ದಿವ್ಯಾರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಥಾನದಿಂದ ತೆರವುಗೊಳಿಸುವ ತೀರ್ಮಾನ ಕೈಗೊಂಡಿದೆ. ಅದರಂತೆ ಪಕ್ಷದ ಒತ್ತಡಕ್ಕೆ ಮಣಿದು ದಿವ್ಯಾ ಕೊನೆಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿದೆ.
ಇದೇ ವೇಳೆ ಎಡಿಎಂ ನವೀನ್‌ಬಾಬುರ ಸಾವಿಗೆ ಸಂಬಂಧಿಸಿ ಆತ್ಮಹತ್ಯೆ ಪ್ರೇರಣೆ ಆರೋಪಹೊರಿಸಿ ಕೇಸು ದಾಖಲಿಸಿದ ಹಿನ್ನೆಲೆಯಲ್ಲಿ ಪಿ.ಪಿ. ದಿವ್ಯಾ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಂದು ದಿವ್ಯಾರಿಂದ ಹೇಳಿಕೆ ದಾಖಲಿಸಿಕೊ ಳ್ಳಲಿದ್ದಾರೆ. ನವೀನ್‌ಬಾಬು ವಿರುದ್ಧ ಲಂಚ ಆರೋಪಹೊರಿಸಿದ ಪ್ರಶಾಂತ್ ಎಂಬವರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಳ್ಳಲಿ ದ್ದಾರೆಂದೂ ಇನ್ನಷ್ಟು ಮಂದಿಯನ್ನು ಆರೋಪಿಯಾಗಿ ಸೇರಿಸುವ ವಿಷಯವು ಪರಿಗಣನೆಯಲ್ಲಿ ದೆಯೆಂದು ಹೇಳಲಾಗುತ್ತಿದೆ.
ಇದೇ ವೇಳೆ ಅರ್ಜಿಯ ಮೇಲೆ ತೀರ್ಪು ಕಲ್ಪಿಸುವಲ್ಲಿ ಎಡಿಎಂ ನವೀನ್‌ಬಾಬು ಅವರಿಂದ ಲೋಪವುಂಟಾಗಿಲ್ಲವೆಂದು ಜಿಲ್ಲಾಧಿಕಾರಿಯ ವರದಿ ಕೂಡಾ ಬಹಿರಂಗಗೊಂಡಿದೆ. ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿ ಎನ್‌ಒಸಿ ಫೈಲ್‌ಗೆ ಒಂದು ವಾರದೊಳಗೆ ತೀರ್ಪು ಕಲ್ಪಿಸಲಾಗಿದೆಯೆಂದು ಜಿಲ್ಲಾಧಿಕಾರಿಯ ವರದಿಯಲ್ಲಿ ತಿಳಿಸಲಾಗಿದೆ.