ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮೃತದೇಹ ಮನೆಯೊಳಗೆ ಪತ್ತೆ
ನೆಲ್ಲಿಕಟ್ಟೆ: ಪೈಕ ಬಾಲಡ್ಕ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿ| ಕೊರಗರ ಪುತ್ರಿ ಕೊರಪ್ಪಾಳು 64) ಮೃತಪಟ್ಟವರು. ಕಳೆದ ಮೂರು ದಿನಗಳಿಂದ ಇವರು ಮನೆಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ಬಂದು ನೋಡಿದಾಗ ಮೃತದೇಹ ಕಂಡುಬಂದಿದೆ. ಇವರ ಪತಿ ವರ್ಷಗಳ ಹಿಂದೆ ಇವರನ್ನು ಬಿಟ್ಟುಹೋಗಿದ್ದರೆನ್ನಲಾಗಿದೆ. ಸಹೋದರ ಚಂದು ಈ ಹಿಂದೆ ಮೃತಪಟ್ಟಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.