ಏತಡ್ಕ ಶ್ರೀ ಸದಾಶಿವ ಕ್ಷೇತ್ರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭ: ಎಡನೀರು ಶ್ರೀಗಳಿಂದ ಧಾರ್ಮಿಕ ಸಭೆ ಉದ್ಘಾಟನೆ
ಏತಡ್ಕ: ಭಾರತ ವೇದಪ್ರಕಾಶ ಗೊಂಡು ಜಗದೆಡೆಗೆ ಪಸರಿಸಿದ ಪುಣ್ಯ ಭೂಮಿ. ಇಲ್ಲಿಯ ಧರ್ಮ ವೈವಿಧ್ಯ ಮಯ ಆಚರಣೆಯ ಮೂಲಕ ಸಕಲ ಜೀವರಾಶಿಗಳಿಗೂ ಒಳಿತನ್ನು ಸಾರುವ ಋಷಿ ಪರಂಪರೆಯ ಹಿನ್ನೆಲೆಯದ್ದು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಏತಡ್ಕ ಶ್ರೀ ಸದಾಶಿವ ದೇವಾ ಲಯದಲ್ಲಿ ಮಂಗಳವಾರ ಆರಂಭಗೊಂಡ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂ ಗವಾಗಿ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಕಲರಿಗೂ ಒಳಿತನ್ನು ಬಯಸುವ ಸದಾಶಿವ ಕಲ್ಪನೆ ನಮ್ಮಲ್ಲಿ ಸಾಕಾರಗೊಳ್ಳುವ ಮೂಲಕ ನಾವೇ ಸ್ವತಃ ಸದಾಶಿವರಾಗಬೇಕು ಎಂದು ಅವರು ನುಡಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿದರು. ಆರ್‌ಎಸ್‌ಎಸ್ ಕುಟುಂಬ ಪ್ರಬೋಧನ ರಾಷ್ಟ್ರೀಯ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡಿ ಕುಟುಂಬವೆಂದರೆ ಮೂರರಿಂದ ನಾಲ್ಕು ತಲೆಮಾರುಗಳು ಜೊತೆಜೊ ತೆಗೆ ಬದುಕುವ ವ್ಯವಸ್ಥೆಯಾಗಿದ್ದು, ಅದಿಂದು ಮರೀಚಿಕೆಯಾಗು ತ್ತಿರುವುದು ಕಳವಳ ಕಾರಿ ಎಂದರು. ಉದ್ಯಮಿ ವಸಂತ ಪೈ ಬದಿಯಡ್ಕ, ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ, ಸಮಿತಿ ಗೌರವಾಧ್ಯಕ್ಷ ಡಾ. ವೈ ಸುಬ್ರಾಯ ಭಟ್ ಉಪಸ್ಥಿತರಿದ್ದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವೈ. ಶ್ಯಾಮ್ ಭಟ್ ಪ್ರಸ್ತಾಪಿಸಿ ಸ್ವಾಗತಿಸಿದರು. ಚಂದ್ರ ಶೇಖರ ಏತಡ್ಕ ವಂದಿಸಿದರು. ರಮೇಶ್ ವೈ ನಿರೂಪಿಸಿದರು. ಈ ಸಂದರ್ಭ ದೇವಾ ಲಯ ಪುನರ್ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಶೇಖರ ಆಚಾರ್ಯ ಬಾಯಾರು, ದೀಕ್ಷಿತ್ ರೈ, ಜಗದೀಶ್ ಪೆರಡಾಲರನ್ನು ಸನ್ಮಾನಿಸಲಾಯಿತು.