ಐದರ ಬಾಲಕಿಯನ್ನು ದೌರ್ಜನ್ಯಗೈದು ಉಸಿರುಗಟ್ಟಿಸಿ ಕೊಲೆ

ಪಣಜಿ: ಐದರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದ ಬಳಿಕ ಕುತ್ತಿಗೆ ಬಿಗಿದು ಕೊಲೆಗೈದ ಪೈಶಾಚಿಕ ಕೃತ್ಯ ನಡೆದಿದೆ. ಸೌತ್ ಗೋವಾದ ವಾಸ್ಕೋ ಎಂಬಲ್ಲಿ ಈ ಘಟನೆ ನಡೆದಿ ದೆ. ಅನ್ಯರಾಜ್ಯ ಕಾರ್ಮಿಕ ದಂಪತಿಯ ಪುತ್ರಿಯಾದ ಬಾಲಕಿಯನ್ನು ನಿ ರ್ಮಾಣ ಹಂತದ ಕಟ್ಟಡದೊಳಗೆ  ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಈಘಟನೆಗೆ ಸಂಬಂ ಧಿಸಿ ಅನ್ಯ ರಾಜ್ಯ ಕಾರ್ಮಿಕನಾದ ಓರ್ವನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

You cannot copy contents of this page