ಐಪಿಎಲ್ ಫೈನಲ್ ಇಂದು: ಯಾರೇ ಗೆದ್ದರೂ ನೂತನ ಚಾಂಪ್ಯನ್‌ನ ಉದಯ ಖಚಿತ

ಅಹಮದಾಬಾದ್: ಐಪಿಎಲ್ ನಲ್ಲಿ ಇಂದು ಆವೇಷಕರವಾದ ಹೋರಾಟ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮಧ್ಯೆ ಅಹಮದಾ ಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ರಾತ್ರಿ ೭.೩೦ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಯಾವ ತಂಡ ಗೆದ್ದರೂ ಹೊಸ ಚಾಂಪ್ಯನ್‌ನ ಉದಯವಾಗಲಿದೆ ಎಂಬುದು ಈ ಬಾರಿಯ ಪ್ರತ್ಯೇಕತೆಯಾಗಿದೆ. ಬೆಂಗಳೂರು ನಾಲ್ಕನೇ ಬಾರಿ ಹಾಗೂ ಪಂಜಾಬ್ ಎರಡನೇ ಬಾರಿ ಫೈನಲ್‌ನಲ್ಲಿ ಸೆಣಸಾಡುತ್ತಿದೆ.

ಟೂರ್ನಮೆಂಟ್‌ನಲ್ಲಿ ಇದುವರೆಗೆ ಚಾಂಪ್ಯನ್ ಪಟ್ಟ ಗಳಿಸುವ ಈ ತಂಡ ಗಳಿಗೆ ಸಾಧ್ಯವಾಗಲಿಲ್ಲ. ಅಭಿಮಾನಿಗಳ 18 ವರ್ಷದ ಕಾಯುವಿಕೆಯನ್ನು ಕೊನೆಗೊಳಿಸಿ ಕಿರೀಟ ಮುಡಿಗೇರಿಸುವ ನಿರೀಕ್ಷೆಯಲ್ಲಿ ಬೆಂಗಳೂರು ತಂಡವಿದೆ. ಒಟ್ಟು 614 ರನ್ಸ್ ಗಳಿಸಿದ ವಿರಾಟ್ ಕೊಹ್ಲಿಯ ಸ್ಪೋಟಕ ಫಾರ್ಮ್ ತಂಡಕ್ಕೆ ಟಾನಿಕ್ ಆಗಿದೆ. ಕ್ಯಾಪ್ಟನ್ ರಜತ್ ಪಡಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮ, ಟೀಮ್ ಡೇವಿಡ್ ಎಂಬಿವರು ಸೇರಿದ ಬಲಶಾಲಿ ಬ್ಯಾಟಿಂಗ್ ಪಟುಗಳು ತಂಡದಲ್ಲಿದ್ದಾರೆ. 21 ವಿಕೆಟ್ ಗಳಿಸಿದ ಆಸ್ಟ್ರೇಲಿಯನ್ ಪೇಸರ್ ಜೋಶ್ ಹಸಲ್ ವುಡ್ ಬೌಲಿಂಗ್‌ನ್ನು ನಿಯಂತ್ರಿಸುವರು. ಭುವನೇಶ್ವರ್ ಕುಮಾರ್, ಯಾಶ್ ದಯಾಳ್, ಕೃಣಾಲ್ ಪಾಂಡ್ಯ, ಸುಯಾಶ್ ಶರ್ಮ ಎಂಬಿವರು ಬೌಲಿಂಗ್ ವಿಭಾಗದಲ್ಲಿ ಶಕ್ತರಾಗಿದ್ದಾರೆ. ಕ್ವಾಲಿಫಯರ್ ಒಂದರಲ್ಲಿ ಪಂಜಾಬನ್ನು ಸೋಲಿಸಿ ಫೈನಲ್‌ಗೆ ತಲುಪಿದ ಆತ್ಮವಿಶ್ವಾಸ ಬೆಂಗಳೂರಿಗಿದೆ. ಕ್ವಾಲಿಫಯರ್ 2ರಲ್ಲಿ ಬಲಶಾಲಿಗಳಾದ ಮುಂಬಯಿಯನ್ನು ಪುಡಿಗಟ್ಟಿದ ಆವೇಷದಲ್ಲಿ ಪಂಜಾಬ್ ಇದೆ. 6 ಅರ್ಧ ಸೆಂಚುರಿಗಳೊಂದಿಗೆ 603 ರನ್ಸ್ ಗಳಿಸಿದ ನಾಯಕ ಶ್ರೇಯಸ್ ಅಯ್ಯರ್ ಪಂಜಾಬ್‌ನ ನಿರೀಕ್ಷೆಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ. ಮುಂಬೈ ವಿರುದ್ಧ ಪ್ರಕಟಗೊಂಡ ಶ್ರೇಯಸ್ ಅಯ್ಯರ್‌ರ ನಾಯಕತ್ವದ ಶ್ರೇಷ್ಠತೆ ತಮಗೆ ಮೊದಲ ಕಿರೀಟ ಮುಡಿಗೇರಿಸುವುದಕ್ಕೆ ಸಹಾಯಕವಾದೀತು ಎಂಬುದು ಪಂಜಾಬ್‌ಗೆ ನಿರೀಕ್ಷೆಯಾಗಿದೆ.

ಪ್ರಬ್‌ಸಿಮ್ರಾನ್ ಸಿಂಗ್, ಪ್ರಿಯಾನ್ಶ್ ಆರ್ಯ, ಜೋಶ್ ಇನ್‌ಗ್ಲಿಸ್, ನೇಹಾಲ್ ವದೇರ ಎಂಬಿವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. 18 ವಿಕೆಟ್ ಗಳಿಸಿದ ಪೇಸರ್ ಅರ್ಷದೀಪ್ ಬೌಲಿಂಗ್ ಮುನ್ನಡೆಸುವರು. ಸ್ಪಿನ್ನರ್ ಯೂಸ್ ವೇಂದ್ರ ಚಹಲ್, ಯುವ ಪೇಸರ್ ವಿಜಯ ಕುಮಾರ್, ವೈಶಾಕ್ ಉತ್ತಮ ಫಾಮ್‌ನಲ್ಲಿದ್ದಾರೆ. ಮಳೆಗೆ ಸ್ಪರ್ಧೆ ಮೊಟಕಾದರೆ ರಿಸರ್ವ್ ದಿವಸವಾದ ನಾಳೆ ಸ್ಪರ್ಧೆ ನಡೆಯಲಿದೆ. ನಾಳೆಯೂ ಮೊಟಕಾದರೆ ಪಾಯಿಂಟ್ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಗಣನೆಗೆ ತೆಗೆದು ಪಂಜಾಬ್ ವಿಜಯಿ ಎಂದು ಘೋಷಿಸುವ ಸಾಧ್ಯತೆ ಇದೆ.

RELATED NEWS

You cannot copy contents of this page