ಐಲ ಕ್ಷೇತ್ರದಲ್ಲಿ ನೂತನ ಅಡುಗೆ ಶಾಲೆ ಮತ್ತು ಅನ್ನಪೂರ್ಣ ಭೋಜನ ಶಾಲೆ ಉದ್ಘಾಟನೆ ೧೫ರಂದು

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಅಡುಗೆ ಶಾಲೆ ಮತ್ತು ಅನ್ನಪೂರ್ಣ ಭೋಜನ ಶಾಲೆಯ ಉದ್ಘಾಟನಾ ಸಮಾರಂಭ ಈ ತಿಂಗಳ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಕಲಾ ಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಆಶೀರ್ವಚನ ನೀಡುವರು. ಬೆಂಗಳೂರು ಉದ್ಯಮಿ ಗಿರೀಶ್ ರಾವ್ ನಿಧಿಮುಂಡ ಅಧ್ಯಕ್ಷತೆ ವಹಿಸುವರು. ಮುಂಬಯಿ ಉದ್ಯಮಿ ರಘುರಾಮ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉಮೇಶ್ ಅಟ್ಟೆಗೋಳಿ, ಮಲ್ಲಿಕಾ ಪ್ರಶಾಂತ್ ಪಕ್ಕಳ ಕೋಡಿಬೈಲ್, ಡಾ.ರೋಷನ್ ಶೆಟ್ಟಿ, ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ, ಪಿ.ಆರ್.ಶೆಟ್ಟಿ ಪೊಯ್ಯಲು, ಶ್ರೀಧರ ಶೆಟ್ಟಿ ಮುಟ್ಟಂ, ವಿನೋದ್ ಪುತ್ತೂರು, ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಮಜಲು ಶಂಕರನಾರಾಯಣ ಹೊಳ್ಳ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಹಿರಿಯ ಧಾರ್ಮಿಕ ಚಿಂತಕ ತಿಂಬರ ಸುಬ್ರಾಯ ಹೊಳ್ಳ, ಉದ್ಯಮಿ ಸಿ.ಎಸ್. ಕೃಷ್ಣಪ್ಪ ಐಲ, ಸ್ಯಾಕ್ಸೋಫೋನ್ ವಾದಕ ಅನಂತ ಪದ್ಮನಾಭ ಐಲ ಇವರನ್ನು ಗೌರವಿಸಲಾಗುವುದು. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ನೃತ್ಯಾಂತ ರಂಗ ಮತ್ತು ಮಾತೃದೇವೋಭವ ನೃತ್ಯ ರೂಪಕ ನಡೆಯಲಿದೆ.

You cannot copy contents of this page