ಐ.ಎಂ.ಎ ಯಿಂದ ವೈದ್ಯರ ದಿನಾಚರಣೆ, ಪುರಸ್ಕಾರ ಪ್ರದಾನ

ಕಾಸರಗೋಡು: ಇಂಡ್ಯನ್ ಮೆಡಿಕಲ್ ಅಸೋಸಿಯೇಶನ್ ಬ್ರಾಂಚ್ ಕಮಿಟಿ  ನೇತೃತ್ವದಲ್ಲಿ ವೈದ್ಯರ ದಿನ ಆಚರಿಸಲಾಯಿತು. ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜ್ ಡೀನ್ ಡಾ| ಸಂದೀಪ್ ರೈ ಉದ್ಘಾಟಿಸಿದರು. ಐಎಂಎ ಅಧ್ಯಕ್ಷ ಡಾ| ಹರಿಕಿರಣ್ ಟಿ ಬಂಗೇರ ಅಧ್ಯಕ್ಷತೆ ವಹಿಸಿದರು.  ಹಿರಿಯ ವೈದ್ಯರುಗಳಾದ  ಡಾ| ನಾರಾಯಣ ನಾಯ್ಕ್ ವೈ.ಎ, ಡಾ| ರಾಫಿ ಎ ಅಹಮ್ಮದ್ ಎಂಬಿವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾ ಯಿತು. ಪಾರಾ ಮೆಡಿಕಲ್ ವಲಯದಲ್ಲಿ ಉತ್ತಮ ಸೇವೆಗೈದ ಜನರಲ್ ಆಸ್ಪತ್ರೆಯ ನಿವೃತ್ತ ನರ್ಸಿಂಗ್ ಸುಪರಿನ್‌ಟೆಂಡೆಂಟ್  ಕೆ. ಕಮಲಾಕ್ಷಿ ಯವರಿಗೆ  ಕ್ಯಾ| ಕೆ.ಎ. ಶೆಟ್ಟಿ ಎಂಡೋಮೆಂಡ್ ಅವಾರ್ಡ್, ನಾಗರತ್ನ ಎ ಅವರಿಗೆ ಡಾ| ಬಿ.ಎಸ್. ರಾವ್ ಎಂಡೋಮೆಂಟ್ ಅವಾರ್ಡ್ ಪ್ರದಾನಗೈಯ್ಯ ಲಾಯಿತು. ಶಿಕ್ಷಣ ಹಾಗೂ ವಿವಿಧ ವಲಯಗಳಲ್ಲಿ ಉತ್ತಮ ಸಾಧನೆಗೈದ ನೂಹ ಜಮಾಲ್ ಎ, ಹಿಮಜಾ ಬಾ, ಸಮರ್ಥ್ ಕಾಮತ್, ನೂಹ್ ಖಾಸಿಂ, ಅನಘ ರಾವ್ ಎಂಬಿವರಿಗೆ ಚಿಲ್ಡ್ರನ್ ಟಾಲೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು. ವಿವಿಧ ವಲಯಗಳಲ್ಲಿ ಉತ್ತಮ ಸಾಧನೆಗೈದ ಡಾ| ನಾರಾಯಣ ನಾಯ್ಕ್ ಬಿ, ಡಾ| ಜಿತೇಂದ್ರ ರೈ, ಡಾ| ಜನಾರ್ದನ ನಾಯ್ಕ್ ಸಿ.ಎಚ್, ಡಾ| ಜಯಲಕ್ಷ್ಮಿ, ಡಾ| ಜ್ಯೋತಿ ಎಸ್, ಡಾ| ಸುರೇಶ್ ಮಲ್ಯ ಎಂಬಿವರನ್ನು ಗೌರವಿಸ ಲಾಯಿತು.  ಚೆಯರ್‌ಮೆನ್ ಡಾ| ನಾರಾಯಣ ನಾಯ್ಕ್ ಬಿ, ಮಾಜಿ ಅಧ್ಯಕ್ಷ ಡಾ| ಜಿತೇಂದ್ರ ರೈ, ಡಾ| ಖಾಸಿಂ ಟಿ, ಡಾ| ಅಣ್ಣಪ್ಪ ಕಾಮತ್ ಕೆ ಮಾತನಾಡಿದರು.

RELATED NEWS

You cannot copy contents of this page