ಒಂದರ ಹಿಂದೆ ಮತ್ತೊಂದು ಭ್ರಷ್ಟಾಚಾರ ಆರೋಪ: ಕುಂಬಳೆಯಲ್ಲಿ ನೂರಾರು ಮಂದಿ ಮುಸ್ಲಿಂ ಲೀಗ್, ಯೂತ್ ಲೀಗ್ ಕಾರ್ಯಕರ್ತರು ರಾಜೀನಾಮೆಯತ್ತ
ಕುಂಬಳೆ: ಕುಂಬಳೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣ ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಬಳಿಕ ಹುಟ್ಟಿಕೊಂಡ ವಿವಾದಗಳ ಬೆನ್ನಲ್ಲೇ ಹೊಯ್ಗೆ ಕಡವಿಗೆ ಸಂಬಂಧಿಸಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗೆ ಭ್ರಷ್ಟಾಚಾರಗಳ ಸರಣಿಯೇ ಕೇಳಿ ಬಂದುದರಿಂದ ಅಸಮಾ ಧಾನಗೊಂಡ ಕುಂಬಳೆಯ ನೂರಾರು ಮಂದಿ ಮುಸ್ಲಿಂ ಲೀಗ್, ಯೂತ್ ಲೀಗ್ ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿದ್ದಾರೆ. ಹೊಯ್ಗೆಕಡವಿಗೆ ಸಂಬಂಧಿಸಿ ಯೂತ್ ಲೀಗ್ ನೇತಾರನನ್ನು ಸೂಪರ್‌ವೈಸರ್ ಸ್ಥಾನದಿಂದ ತೆರವುಗೊಳಿಸಿದ ಬೆನ್ನಲ್ಲೇ ಭ್ರಷ್ಟಾಚಾರ ಆರೋಪಗಳ ಮಾಲೆಪಟಾಕಿಗೆ ಬೆಂಕಿ ಹರಡಿದ ಅನುಭವ ಉಂಟಾಗಿದೆ. ಆದರೆ ಇಂತಹ ಸ್ಥಿತಿ ಉಂಟಾಗಿಯೂ ಆ ಬಗ್ಗೆ ಮಧ್ಯಸ್ಥಿಕೆ ವಹಿಸಲು ಅಥವಾ ಸಮಸ್ಯೆಗೆ ಪರಿಹಾರ ಕಾಣಲು ಪಕ್ಷದ ಮಂಡಲ, ಜಿಲ್ಲಾ ನಾಯಕತ್ವ ನಿರುತ್ಸಾಹಪಡುತ್ತಿದೆ. ಇದೀಗ ಕುಂಬಳೆ ಯಲ್ಲಿ ಲೀಗ್‌ನ ಭಿನ್ನಾಭಿಪ್ರಾಯಕ್ಕೆ ಪೂರ್ಣ ಹೊಣೆಗಾರಿಕೆ ಮುಸ್ಲಿಂಲೀಗ್ ಮಂಡಲ, ಜಿಲ್ಲಾ ನಾಯಕತ್ವ ವಾಗಿದೆಯೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಹೊಯ್ಗೆ ವ್ಯಾಪಾರ ವಿವಾದದ ಬೆನ್ನಲ್ಲೇ ಪಕ್ಷದ ಜಿಲ್ಲಾ ಸಮಿತಿ ತನಿಖಾ ಆಯೋಗವನ್ನು ನೇಮಿಸಿದ್ದು, ಈ ಆಯೋಗ ಅಧ್ಯಯನ ನಡೆಸಿ ಮನವಿ ಸಲ್ಲಿಸಿದ್ದರೂ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗದ ರೀತಿಯಲ್ಲಿ ನಾಯಕತ್ವದಲ್ಲಿ ಒಂದು ವಿಭಾಗ ಆರೋಪ ಹೊರಿಸಿದವರೊಂದಿಗೂ ಮತ್ತೊಂದು ವಿಭಾಗ ವಿರುದ್ಧ ವಿಭಾಗದೊಂದಿಗೆ ನಿಂತಿತು. ಆದ್ದರಿಂದಲೇ ಜಿಲ್ಲಾ ನಾಯಕತ್ವದ ನಿಲುವುಗಳು ಪದೇ ಪದೇ ಬುಡಮೇಲಾಯಿತು. ಕೊನೆಗೆ ಮಂಡಲ, ಪಂಚಾಯತ್ ಲೀಗ್ ನೇತಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ೨೧-೪-೨೦೨೫ರಂದು ರಾಜ್ಯ ಸಮಿತಿ ತೀರ್ಮಾನ ಕೈಗೊಂಡು ಜಿಲ್ಲಾ ಸಮಿತಿಗೆ ಪತ್ರ ಬರೆದಿತ್ತು. ಆದರೆ ಈ ವಿಷಯದಲ್ಲಿ ಜಿಲ್ಲಾ ನಾಯಕತ್ವದಲ್ಲಿ ಹುಟ್ಟಿಕೊಂಡ ಗುಂಪುಗಾರಿಕೆ ತೀವ್ರಗೊಂಡಿತು.
ಪಕ್ಷವೇ ಎರಡು ವಿಭಾಗವಾಗುವ ಸ್ಥಿತಿ ಉಂಟಾಯಿತು. ಪತ್ರವನ್ನು ಜಿಲ್ಲಾ ಸಮಿ ತಿಯ ಒಂದು ವಿಭಾಗ ಬಚ್ಚಿಟ್ಟಿರುವುದೇ ಅನಂತರದ ಸಮಸ್ಯೆಗಳಿಗೆ ಕಾರಣವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣದ ಭ್ರಷ್ಟಾಚಾರ ಆರೋಪ ತೀವ್ರಗೊಂಡಿತು. ಅಂದು ಆರೋಪವಿಧೇಯರಾದವರ ವಿರುದ್ಧ ಕ್ರಮ ಕೈಗೊಂಡಿರುತ್ತಿದ್ದರೆ ಈಗಿನ ವಿವಾದಗಳನ್ನು ಹೊರತುಪಡಿಸ ಬಹುದಾಗಿತ್ತೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಪ್ರತೀ ದಿನ ಬೆಳಕಿಗೆ ಬರುವ ಭ್ರಷ್ಟಾ ಚಾರ ಆರೋಪಗಳಿಂದಾಗಿ ಲೀಗ್ ಕಾರ್ಯಕರ್ತರಿಗೆ ಮುಖತೋರಿಸಿ ನಡೆಯಲಾಗದ ಸ್ಥಿತಿ ಉಂಟಾಗಿ ದೆಯೆಂದು ಹೇಳಲಾಗುತ್ತಿದೆ. ಮಂಡಲ, ಜಿಲ್ಲಾ ಸಮಿತಿಗಳ ನಿಲುವುಗಳನ್ನು ಪ್ರತಿಭಟಿಸಿ ರಾಜೀನಾಮೆ ನೀಡುವ ಕಾರ್ಯಕರ್ತರು ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲೂ ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ. ಚೆರ್ಕಳಂ ಅಬ್ದುಲ್ಲ, ಪಿ.ಬಿ. ಅಬ್ದುಲ್ ರಜಾಕ್, ಗೋಲ್ಡನ್ ಅಬ್ದುಲ್ ಖಾದರ್ ಎಂಬಿವರು ಇರುತ್ತಿದ್ದರೆ, ಇಂತವರನ್ನು ಈ ಹಿಂದೆಯೇ ಹೊರ ಹಾಕುತ್ತಿದ್ದರೆಂದೂ, ಆದರೆ ಈಗ ಮಂಡಲ, ಜಿಲ್ಲೆಯಲ್ಲಿ ಅದಕ್ಕೆ ಧೈರ್ಯವುಳ್ಳ ನೇತಾರರು ಇಲ್ಲವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ.ಈತನ್ಮಧ್ಯೆ ಹಲವು ಕಾಲದಿಂದ ಮುಸ್ಲಿಂಲೀಗ್‌ನ ನಾಯಕತ್ವದಲ್ಲಿರುವ ಆಡಳಿತ ಸಮಿತಿ ಕುಂಬಳೆ ಪಂಚಾಯತ್‌ನ್ನು ಆಳುತ್ತಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನ ಮೂರು ವಾರ್ಡ್‌ಗಳು ಲೀಗ್‌ನ ಕೈಯಿಂದ ನಷ್ಟಗೊಳ್ಳುವುದರೊಂದಿಗೆ ಎಸ್‌ಡಿಪಿಐ ಸದಸ್ಯರ ಬೆಂಬಲದಿಂದ ಕಷ್ಟಪಟ್ಟು ಆಡಳಿತವನ್ನು ಉಳಿಸಿಕೊಳ್ಳಲಾಗಿದೆ. ಆದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ತಿಂಗಳೊಳಗೆ ನಡೆಯುವ ಚುನಾವಣೆ ಯಲ್ಲಿ ಆಡಳಿತ ಕೂಡಾ ನಷ್ಟಗೊಳ್ಳುವ ಸಾಧ್ಯತೆ ಇದೆಯೆಂದು ಲೀಗ್ ಕಾರ್ಯಕರ್ತರು ಆತಂಕ ವ್ಯಕ್ತಪಡಿಸು ತ್ತಿದ್ದಾರೆ. ಹಾಗೆ ಸಂಭವಿಸಿದಲ್ಲಿ ಅದರ ಹೊಣೆಗಾರಿಕೆ ಯಾರಿಗಾಗಿರುವುದು ಎಂದು ಕಾರ್ಯಕರ್ತರು ನಾಯಕತ್ವದೊಂದಿಗೆ ಪ್ರಶ್ನಿಸುತ್ತಿದ್ದಾರೆ.