‘ಒಂದು ದೇಶ ಒಂದು ಚುನಾವಣೆ’ ಶೀಘ್ರ ಜ್ಯಾರಿ-ಪ್ರಧಾನಿ ಮೋದಿ

ಕವಡಿಯಾ: ದೇಶದಲ್ಲಿ ಒಂದು ದೇಶ, ಒಂದು ಚುನಾವಣೆ ಶೀಘ್ರ ಜ್ಯಾರಿ ಗೊಳಿಸಲಾಗುವುದೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.

ಭಾರತದ ಉಕ್ಕಿನ ಮನುಷ್ಯ ಸರದಾರ ವಲ್ಲಭಬಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿನಾಚರಣೆ ಯನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ  ಗುಜರಾತ್‌ನ ಕವಡಿಯಾದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಈ ವಿಷಯ ತಿಳಿಸಿದ್ದಾರೆ. ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಜ್ಯಾರಿಗೊಳಿಸುವ ಸಿದ್ಧತೆಯಲ್ಲೂ ಕೇಂದ್ರ ಸರಕಾರ ತೊಡಗಿವೆ. ವನ್ ನೇಶನ್, ವನ್ ಪವರ್‌ಗ್ರಿಡ್ ಮೂಲಕ ದೇಶದ ವಿದ್ಯುತ್ ವಲಯವನ್ನು ನಾವು ಬಲಪಡಿಸಿದ್ದೇವೆ. ಬಡವರಿಗೆ  ಲಭ್ಯವಿರುವ ಸೌಲಭ್ಯಗಳನ್ನು ವನ್ ನೇಶನ್ ವನ್ ರೇಶನ್ ಕಾರ್ಡ್ ಮೂಲಕ  ಸಂಯೋಜಿಸಿದ್ದೇವೆ. ಆಯುಷ್ಮಾನ್ ಭಾರತ್ ರೂಪದಲ್ಲಿ ಜನರಿಗೆ ಒಂದು ರಾಷ್ಟ್ರ ಒಂದು ಆರೋಗ್ಯ ವಿಮೆ ಸೌಲಭ್ಯವನ್ನು ಕೇಂದ್ರ ಸರಕಾರ ಒದಗಿಸಿದೆಯೆಂದು ಪ್ರಧಾನಿ ಹೇಳಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆ ಸಂಕಲ್ಪ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿವೆ. ಇದು ಭಾರತದ ಸಂಪನ್ಮೂಲಗಳ ಗರಿಷ್ಠ ಫಲಿತಾಂಶಗಳನ್ನು ನೀಡುವುದರ ಜತೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಧಿಸುವಲ್ಲಿ ದೇಶವು ಈ ಹೊಸ ವೇಗವನ್ನು ಪಡೆಯುತ್ತಿದೆ. ಇದು ಭಾರತವು ಜಾತ್ಯತೀತ ನಾಗರಿಕ ಸಂಹಿತೆಯಾದ ಒಂದು ರಾಷ್ಟ್ರ ನಾಗರಿಕ ಸಂಹಿತೆಯತ್ತ  ಸಾಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page