ಒಂದು ರಾಷ್ಟ್ರ ಒಂದು ಚುನಾವಣೆ: ಚರ್ಚೆ ಆರಂಭ
ಹೊಸದಿಲ್ಲಿ: ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಕುರಿತಾದ ಸಾಧಕ ಬಾದಕಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರಕಾರ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರ ನೇತೃತ್ವದಲ್ಲಿ ರಚಿಸಿದ ಸಮಿತಿಯ ಸಭೆ ದಿಲ್ಲಿಯಲ್ಲಿ ಇಂದು ಆರಂಭಗೊಂಡಿದೆ. ಲೋಕಸಭೆಯ ೫೪೩ ಸ್ಥಾನಗಳಲ್ಲಿ ಕನಿಷ್ಠ ಶೇ. ೬೭ರಷ್ಟು ಸದಸ್ಯರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯ ಸಭೆಯ ೨೪೫ ಸ್ಥಾನಗಳಲ್ಲಿ ಶೇ. ೬೭ರಷ್ಟು ಸದಸ್ಯರು ಬೆಂಬಲ ನೀಡಬೇಕು.
ಮಾತ್ರವಲ್ಲ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ತಮ್ಮ ಅನುಮೋದನೆಯನ್ನು ನೀಡಬೇಕಾಗಿದೆ.