ಒಂದು ವಾರ ಹಿಂದೆ ಮಗುವಿಗೆ ಜನ್ಮ ನೀಡಿದ ತಾಯಿ ನಿಧನ

ಮಂಜೇಶ್ವರ: ಒಂದು ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಕೀರ್ತೇಶ್ವರ ನಿವಾಸಿ ಅಜೇಯ್ ಎಂಬವರ ಪತ್ನಿ ನವ್ಯಶ್ರೀ (೨೭) ನಿನ್ನೆ ಮಧ್ಯಾಹ್ನ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ತಿಂಗಳ ೧೧ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಮೊದಲ ಹೆರಿಗೆ ನಡೆದಿತ್ತು. ೧೫ರಂದು ರಕ್ತದೊತ್ತಡ ಕಡಿಮೆಯಾಗಿ  ಗಂಭೀರಾವಸ್ಥೆಗೆ ತಲುಪಿದುದರಿಂದ ಅಲ್ಲ್ಲಿಂದ ವೆನ್ಲಾಕ್ ಆಸ್ಪತ್ರೆಯ ಐಸಿ ವಿಭಾಗಕ್ಕೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಮೃತಪಟ್ಟಿದ್ದಾರೆ. ಇವರ ವಿವಾಹ ಕಳೆದ ಜನವರಿಯಲ್ಲಿ ನಡೆದಿದೆ. ಕರ್ನಾಟಕದ ಬಿ.ಸಿರೋಡ್‌ನ ತುಂಬೆ ನಿವಾಸಿ ಚಂದ್ರಶೇಖರ-ಗುಲಾಬಿ ದಂಪತಿಯ ಪುತ್ರಿಯಾಗಿರುವ ನವ್ಯಶ್ರೀ ಸಹೋದರ ಪ್ರೇಮ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿನ್ನೆ ಸಂಜೆ ಮಂಜೇಶ್ವರ ಗುಡ್ಡೆಕೇರಿ ಸಾರ್ವಜನಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಿತು.

RELATED NEWS

You cannot copy contents of this page