ಒಂದು ವಾರ ಹಿಂದೆ ಹೃದಯ ಶಸ್ತ್ರ ಚಿಕತ್ಸೆ ನಡೆಸಿದ್ದ ವ್ಯಾಪಾರಿ ನಿಧನ
ಬದಿಯಡ್ಕ: ಒಂದು ವಾರ ಹಿಂದೆಯಷ್ಟೇ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಮನೆಯಲ್ಲಿ ವಿಶ್ರಾಂತಿ ಪಡೆ ಯುತ್ತಿದ್ದ ವ್ಯಾಪಾರಿ ಮೃತಪಟ್ಟರು.
ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಕೆ.ಬಿ. ಅಬ್ದುಲ್ ಲತೀಫ್ (49) ಎಂಬವರು ಮೃತಪಟ್ಟ ವ್ಯಕ್ತ್ತಿ. ಇವರು ಬದಿಯಡ್ಕ ಪೇಟೆಯಲ್ಲಿ ಸೋನಾ ಇಲೆಕ್ಟ್ರಿಕಲ್ ಅಂಗಡಿಯ ಮಾಲಕರಾಗಿದ್ದಾರೆ.
ಒಂದು ವಾರ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಇವರ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಚುಚ್ಚು ಮದ್ದು ನೀಡಲಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಿದ್ದು, ಬಳಿಕ ಮನೆಗೆ ಮರಳಿದ್ದರು. ಅಲ್ಪ ಹೊತ್ತಿನಲ್ಲಿ ಅಸೌಖ್ಯ ಕಾಣಿಸಿಕೊಂ ಡಿದ್ದು, ಕೂಡಲೇ ಸಂಬಂಧಿಕರು ಕುಂ ಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಬಂಬ್ರಾಣ ಜುಮಾ ಮಸೀದಿ ಜತೆ ಕಾರ್ಯದರ್ಶಿ, ಸಿಪಿಎಂ ಲೋಕಲ್ ಸಮಿತಿ ಸದಸ್ಯನಾಗಿದ್ದರು. ಸಾಮಾಜಿಕ ಕಾರ್ಯಕರ್ತನಾಗಿದ್ದ ಇವರು ನಾಡಿನಲ್ಲಿ ಚಿರಪರಿಚಿತರಾಗಿದ್ದರು.
ಮೃತದೇಹದ ಅಂತ್ಯಸಂಸ್ಕಾರ ಸಂಜೆ ಬಂಬ್ರಾಣ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.
ಮೃತರು ಪತ್ನಿ ಅಸ್ಮ, ಮಕ್ಕಳಾದ ಶಿಬಿಲಿ, ಸಮ್ಮಾಸ್, ಶಿಬಿಲ, ಶಮ್ಮ, ಶಿಮಾಕ್, ಸಹೋದರ-ಸಹೋದರಿಯರಾದ ಕೆ.ಬಿ. ಹನೀಫ, ಕೆ.ಬಿ. ಅಬ್ದುಲ್ ರಹಿಮಾನ್, ಅವ್ವಮ್ಮ, ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೆ.ಬಿ. ಯೂಸಫ್ ಈ ಹಿಂದೆ ನಿಧನಹೊಂದಿದ್ದಾರೆ.