ಒಂದು ಸ್ಕೂಟರ್‌ನಲ್ಲಿ ನಾಲ್ಕು ಮಂದಿ: ಮಾಲಕನಿಗೆ 12 ಸಾವಿರ ದಂಡ
ಕಾಸರಗೋಡು: ಒಂದು ಸ್ಕೂಟರ್‌ನಲ್ಲಿ ನಾಲ್ಕು ಮಂದಿ ಪ್ರಯಾಣಿಸಿದ ಆರೋಪದಂತೆ ಅನ್ಯರಾಜ್ಯ ಕಾರ್ಮಿಕರಾದ ಸ್ಕೂಟರ್ ಮಾಲಕನಿಗೆ ಮೋಟಾರ್ ವಾಹನ ಇಲಾಖೆ 12,000 ರೂಪಾಯಿ ದಂಡ ವಿಧಿಸಿದೆ. ಕಾಞಂಗಾಡ್ ಮೇಲಾಂಗೋಡ್ ಎಂಬಲ್ಲಿ ಅನ್ಯರಾಜ್ಯ ಕಾರ್ಮಿಕರಾದ ನಾಲ್ಕು ಮಂದಿ ಒಂದೇ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ಬಗ್ಗೆ ಕಾಞಂಗಾಡ್ ಮೋಟಾರ್ ವಾಹನ ಇನ್‌ಸ್ಪೆಕ್ಟರ್ ಎಂ. ವಿಜಯನ್‌ರಿಗೆ ದೂರು ಲಭಿಸಿತ್ತು. ಇದರಂತೆ ಕಾರ್ಯಾಚರಣೆ ನಡೆಸಿ ಸ್ಕೂಟರ್ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಚಾಲಕನಿಗೆ ಲೈಸನ್ಸ್ ಇಲ್ಲ ಮಾತ್ರವಲ್ಲ ನಾಲ್ಕು ಮಂದಿ ಯೂ ಹೆಲ್ಮೆಟ್ ಧರಿಸಿರಲಿಲ್ಲವೆನ್ನಲಾಗಿದೆ.