ಒಂದೇ ಕುಟುಂಬದ ನಾಲ್ವರನ್ನು ಕೊಡಲಿಯಿಂದ ಕಡಿದು ಕೊಲೆಗೈದ ಪ್ರಕರಣ: ವಿಚಾರಣೆ ಆರಂಭ
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪೈವಳಿಕೆ ಕನ್ಯಾಲದ ಒಂದೇ ಕುಟುಂಬ ನಾಲ್ವರನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ)ದಲ್ಲೇ ಆರಂಭಗೊಂಡಿದೆ.
ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಕನ್ಯಾಲ ಸುದೆಂಬಳದ ವಿಠಲ (೬೦), ಬಾಬು (೫೨), ಸದಾಶಿವ (೫೫) ಮತ್ತು ದೇವಕಿ (೫೫) ಎಂಬವರನ್ನು ಸಾಮೂಹಿಕವಾಗಿ ಕಡಿದು ಕೊಲೆಗೈದ ಪ್ರಕರಣವಾಗಿದೆ ಇದು.
೨೦೨೦ ಆಗಸ್ಟ್ ೩ರಂದು ರಾತ್ರಿ ೮ ಗಂಟೆಗೆ ಇಡೀ ಊರನ್ನೇ ನಡುಗಿಸಿದ ಈ ಭೀಕರ ಕೊಲೆ ನಡೆದಿತ್ತು. ಸುದೆಂಬಳದ ಉದಯ್ ಕುಮಾರ್ (೩೮) ಈ ಕೊಲೆ ಪ್ರಕರಣದ ಆರೋ ಪಿಯಾಗಿದ್ದಾನೆ. ಮಂಜೇಶ್ವರ ಪೊಲೀ ಸರು ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಬಳಿಕ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಕೊಲೆಗೈಯ್ಯಲ್ಪಟ್ಟವರೆಲ್ಲಾ ಆರೋಪಿ ಉದಯ ಕುಮಾರ್‌ನ ತಾಯಿಯ ಸಹೋದರ ಮತ್ತು ಸಹೋದರಿಯಾಗಿದ್ದಾರೆ.
ಕೊಲೆನಡೆದ ದಿನದಂದು ಆರೋಪಿ ಕೈಯಲ್ಲಿ ಕೊಡಲಿ ಹಿಡಿದು ಮನೆಯ ಒಳಗಿನ ಹಾಲಿನೊಳಗೆ ನುಗ್ಗಿ ಕೊಡಲಿಯಿಂದ ನಾಲ್ವರನ್ನು ಕಡಿದು ಕೊಲೆಗೈದನೆಂದು ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಸಲಾಗಿದೆ.
ಮಾನಸಿಕ ಅಸ್ವಸ್ಥತೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಕುಟುಂಬ ಸದಸ್ಯರ ಜತೆ ವಾಗ್ವಾದದಲ್ಲಿ ತೊಡಗಿ ಬಳಿಕ ಕೋಪಗೊಂಡು ಕೊಡಲಿಯಿಂದ ನಾಲ್ವರನ್ನು ಕಡಿದು ಹತ್ಯೆ ನಡೆಸಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.