ಒಂದೇ ಕುಟುಂಬದ ಮೂವರು ನೇಣುಬಿಗಿದು ಸಾವು
ಪಾಲಕ್ಕಾಡ್: ಒಂದೇ ಕುಟುಂಬದ ಮೂರು ಮಂದಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲಕ್ಕಾಡ್ ಕುಳಲ್ ಮಂದ ಆಲಿಂಗಾಲ್ ಎಂಬಲ್ಲಿ ಈ ಘಟನೆ ನಡೆದಿದೆ. ಆಲಿಂಗಾಲ್ ಮುತ್ತಾಟುಪರಂಬ್ ನಿವಾಸಿ ಸುಂದರನ್ ಎಂಬವರ ಪುತ್ರಿ ಸಿನಿಲ (೪೨), ಪುತ್ರ ರೋಹಿತ್ (೧೯), ಸುನಿಲರ ಅಕ್ಕನ ಮಗ ಸುಬಿನ್ (೨೩) ಎಂಬಿವರು ನೇಣುಬಿಗಿದು ಸಾವಿಗೀಡಾದವರಾಗಿ ದ್ದಾರೆ. ಇಂದು ಮುಂಜಾನೆ ಮನೆಯ ಅಡುಗೆ ಕೋಣೆ ಭಾಗದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತಲುಪಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.