ಒಣ ಗಾಂಜಾ ವಶ: ಸ್ಕೂಟರ್ ಸಹಿತ ಓರ್ವ ಸೆರೆ
ಕಾಸರಗೋಡು: ಕಾಸರ ಗೋಡು ಎಕ್ಸೈಸ್ ಎನ್ಫೋರ್ಸ್ ಮೆಂಟ್ ಆಂಡ್ ಆಂಟೀ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಸರ್ಕಲ್ ಇನ್ಸ್ಪೆಕ್ಟರ್ ಶಂಕರ್ ಜಿ.ಎ ನೇತೃತ್ವದ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ ೧೦೦ ಗ್ರಾಂ ಒಣ ಗಾಂಜಾ ಪತ್ತೆಹಚ್ಚಿ ವಶಪಡಿಸಲಾ ಗಿದೆ. ಈ ಸಂಬಂಧ ಮಧೂರು ಚೇನೆಕ್ಕೋ ಡಿನ ರಾಂಬೋ ಅಲಿಯಾಸ್ ಅಬ್ದುಲ್ ಖಾದರ್ (೩೫) ಎಂಬಾತನನ್ನು ಬಂಧಿಸಲಾ ಗಿದೆ. ಸ್ಕೂಟರ್ನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆದಿದೆ.
ಈ ಕಾರ್ಯಾಚರಣೆ ತಂಡ ದಲ್ಲಿ ಎಕ್ಸೈಸ್ ಇನ್ಸ್ಪೆಕ್ಟರ್ ರಾಧಾಕೃಷ್ಣನ್ ಪಿ.ಜಿ, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಪ್ರಜಿತ್ ಕೆ.ಆರ್, ಚಾಲಕ ಕ್ರಿಸ್ಟಿನ್ ಪಿ.ಎ ಎಂಬಿವರು ಒಳಗೊಂಡಿದ್ದಾರೆ.