ಒಣ ಗಾಂಜಾ ಸಹಿತ ಓರ್ವ ಸೆರೆ

ಕಾಸರಗೋಡು: ತೆಕ್ಕಿಲ್ ಚೆರುಗರದಲ್ಲಿ ಅಬಕಾರಿ ತಂಡ ನಡೆಸಿದ  ದಾಳಿಯಲ್ಲಿ ೧೫೦ ಗ್ರಾಂ ಒಣಗಿದ ಗಾಂಜಾ ಸಹಿತ ಓರ್ವನನ್ನು ಬಂಧಿಸಿದೆ. ಚೆರುಗರ ನಿವಾಸಿ ಅಬೂಬಕರ್ ಸಿದ್ದಿಕ್ (32) ಬಂಧಿತ ಆರೋಪಿ. ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಬಿಯವರ ನೇತೃತ್ವದ ತಂಡ ನಿನ್ನೆ ಅಪರಾಹ್ನ ಈ ಕಾರ್ಯಾಚರಣೆ ನಡೆಸಿದೆ. ದಾಳಿ ನಡೆಸಿದ ತಂಡದಲ್ಲಿ  ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ಎ, ಪ್ರಿವೆಂಟೀವ್ ಆಫೀಸರ್  ಸುಧೀಂದ್ರ ಎಂ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜಿತೇಂದ್ರನ್ ಕೆ, ಅಭಿಲಾಷ್ ಕೆ ಮತ್ತು ಶುಭ ಎಂಬಿವರು ಒಳಗೊಂಡಿದ್ದರು.

You cannot copy contents of this page