ಒಮಾನ್‌ನಿಂದ ಬಂದ ಯುವತಿ ಒಂದು ಕಿಲೋ ಎಂಡಿಎಂಎ ಸಹಿತ ಸೆರೆ: ಮೂವರು ಯುವಕರು ಕಸ್ಟಡಿಗೆ

ಕಲ್ಲಿಕೋಟೆ: ಒಂದು ಕಿಲೋ ಎಂಡಿಎಂಎ ಸಹಿತ ಒಮಾನ್‌ನಿಂದ ಬಂದ ಯುವತಿಯನ್ನು ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.  ಪತ್ತನಂತಿಟ್ಟ ನಿವಾಸಿ ಸೂರ್ಯ ಎಂಬಾಕೆ ಸೆರೆಗೀಡಾಗಿದ್ದು ಎಂಡಿಎಂಎ ಪಡೆಯಲು ವಿಮಾನ ನಿಲ್ದಾಣಕ್ಕೆ ಬಂದ  ಮೂವರು ತಿರೂರಂಗಾಡಿ ನಿವಾಸಿಗಳನ್ನು ಕಸ್ಟಡಿಗೆ ತೆಗೆಯಲಾಗಿದೆ.

ಸೂರ್ಯ ಕೆಲಸಕ್ಕೆಂದು ತಿಳಿಸಿ ಜುಲೈ 16ರಂದು ಒಮಾನ್‌ಗೆ ತೆರಳಿದ್ದಳು. ಆದರೆ ನಾಲ್ಕು ದಿನಗಳೊಳಗಾಗಿ ಈಕೆ ಮರಳಿ ಬಂದಿದ್ದಾಳೆ. ಈ ವೇಳೆ ಒಂದು ಕಿಲೋ ಎಂಡಿಎಂಎಯನ್ನು ತಂದಿದ್ದಾಳೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಂದ ಯುವತಿ ಚಾಕ್ಲೆಟ್ ಪ್ಯಾಕೆಟ್ ಹಾಗೂ ಆಹಾರ ವಸ್ತುಗಳೊಂದಿಗೆ  ಮಾದಕವಸ್ತು ಬಚ್ಚಿಟ್ಟಿದ್ದಾಳೆ. ಕಸ್ಟಮ್ಸ್‌ನ ಕಣ್ತಪ್ಪಿಸಿ ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ಗುಪ್ತ ಮಾಹಿತಿ ಲಭಿಸಿದ ಪೊಲೀಸ್ ಹಾಗೂ  ಡಾನ್ಸಾಪ್ ತಂಡ ಆಕೆಯನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಇದೇ ವೇಳೆ ಪರಪ್ಪನಂಗಾಡಿ ಮುನ್ನಿಯೂರು ನಿವಾಸಿಗಳಾದ ಮುಹಮ್ಮದ್ ರಾಫಿ, ಅಲಿ ಅಕ್ಬರ್, ಶಫೀಕ್ ಎಂಬಿವರು ವಿಮಾನ ನಿಲ್ದಾಣದ ಹೊರಗೆ  ಸೂರ್ಯಳಿಗಾಗಿ ಕಾದು ನಿಂತಿದ್ದರು. ಕೂಡಲೇ ಅವರನ್ನು ಕಸ್ಟಡಿಗೆ ತೆಗೆಯಲಾಯಿತು.

You cannot copy contents of this page