ಒಮಾನ್ ಸಮುದ್ರದಲ್ಲಿ ಮುಳುಗಿದ ತೈಲ ಟ್ಯಾಂಕರ್ ಹಡಗು: 13 ಭಾರತೀಯರ ಸಹಿತ 16 ಮಂದಿ ನಾಪತ್ತೆ
ಮಸ್ಕತ್: ಒಮಾನ್ ಕರಾವಳಿ ಯಲ್ಲಿ ತೈಲ ಹೇರಿದ ಟ್ಯಾಂಕರ್ ಹಡಗು ಸಮುದ್ರದಲ್ಲಿ ಮುಳುಗಿದೆ. ಪರಿಣಾಮ ಅದರಲ್ಲಿದ್ದ ಹದಿಮೂರು ಮಂದಿ ಭಾರತೀಯರೂ ಸೇರಿದಂತೆ ಹದಿನಾರು ಮಂದಿ ನಾಪತ್ತೆಯಾಗಿರು ವುದಾಗಿ ಸಂ ಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರ ಯಾವುದೇ ಕುರುಹು ಇಲ್ಲಿಯವರೆಗೆ ಲಭಿಸಿಲ್ಲ.
ಬಂದರು ನಗರ ಡುಕ್ಮ್ ಬಳಿ ರಾಸ್ ಮದಕಾದ ಆಗ್ನೇಯಕ್ಕೆ ೨೫ ನೋಟಿಕಲ್ ಮೈಲು ದೂರದಲ್ಲಿ ಕೊಮೊರೊಸ್ ಧ್ವಜ ಹೊಂದಿರುವ ತೈಲ ಟ್ಯಾಂಕ್ ಸಮುದ್ರದಲ್ಲಿ ಮುಳು ಗಿದೆಯೆಂದು ಎಂಎಸ್ಸಿ ಎಕ್ಸ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಡುಕ್ಮ್ ಬಂದರು ಒಮಾನ್‌ನ ನೈರುತ್ಯ ಕರಾವಳಿಯಲ್ಲಿದೆ. ಒಮಾನ್ ಸುಲ್ತಾನರ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳಿಗೆ ಹತ್ತಿರದಲ್ಲಿದೆ. ಇದರಲ್ಲಿ ಪ್ರಮುಖ ತೈಲ ಸಂಸ್ಕರಣಾಗಾರಿಕೆಯೂ ಸೇರಿದೆ ಮಾತ್ರವಲ್ಲ ಇದು ಒಮಾನ್‌ನ ಅತೀ ದೊಡ್ಡ ಆರ್ಥಿಕ ಯೋಜನೆಯಾದ ಡುಕ್ಮ್‌ನ ವಿಶಾಲ ಕೈಗಾರಿಕಾ ವಲಯದ ಭಾಗವೂ ಆಗಿದ.
ಸಮುದ್ರದಲ್ಲಿ ಮುಳುಗಿದ ಹಡಗನ್ನು ಪ್ರಿಸ್ಟೀಜ್ ಫಾಲ್ಕಕ್ ಎಂದು ಗುರುತಿಸಲಾಗಿದ. ಹಡಗಿನ ಎಲ್ಲಾ ಸಿಬ್ಬಂ ದಿಗಳು ನಾಪತ್ತೆಯಾಗಿದ್ದಾರೆ. ಅವರಿಗಾಗಿ ತೀವ್ರ ಶೋಧ ನಡೆಯುತ್ತಿದೆಯೆಂದೂ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಡಗು 2007ರಲ್ಲಿ ನಿರ್ಮಿಸಲಾಗಿದ್ದು, 117 ಮೀಟರ್ ಉದ್ದದ ತೈಲ ಉತ್ಪನ್ನ ಟ್ಯಾಂಕರ್ ಆಗಿದೆಯೆಂದು ಶಿಪ್ಪಿಂಗ್ ಡಾಟಾ ತೋರಿಸುತ್ತಿದೆ.