ಓಣಂ ಸ್ಪೆಷಲ್ ಡ್ರೈವ್ : 547 ಮಂದಿ ಸೆರೆ
ಕಾಸರಗೋಡು: ಓಣಂ ಹಬ್ಬದ ವೇಳೆ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ನಡೆಸಿದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಜಿಲ್ಲೆಯ ವಿವಿಧೆಡೆಗಳಿಂದಾಗಿ ಪೊಲೀಸರು ಒಟ್ಟು ೫೪೨ ಮಂದಿಯನ್ನು ಬಂಧಿಸಿದ್ದಾರೆ. ವಿವಿಧ ಪ್ರಕರಣ ಗಳಲ್ಲಿ ಆರೋಪಿಗಳಾಗಿ ನ್ಯಾಯಾಲಯದಲ್ಲಿ ಹಾಜ ರಾಗದೆ ತಲೆಮರೆಸಿಕೊಂಡಿದ್ದ ೮೯ ಮಂದಿಯೂ ಬಂಧಿತ ರಾದವರಲ್ಲಿ ಒಳಗೊಂಡಿದ್ದಾರೆ.
ಮಾದಕದ್ರವ್ಯ ಉಪಯೋಗ ಹಾಗೂ ಕೈವಶವಿರಿಸಿದ 116 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾದಕ ದ್ರವ್ಯ ಉಪಯೋಗ ಮತ್ತು ಕೈವಶವಿರಿಸಿದ (ಎನ್‌ಡಿಪಿಎಸ್) 120 ಮಂದಿಯನ್ನು ಈ ಅವಧಿಯಲ್ಲಿ ಬಂಧಿಸಲಾಗಿದೆ. 114 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಉಪಯೋಗಕ್ಕೆ ಸಂಬಧಿಸಿ 66 ಪ್ರಕ್ರಣಗಳನ್ನು ದಾಖ ಲಿಸಲಾಗಿದೆ. ನಿಷೇಧಿತ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಕೈವಶವಿರಿಸಿದ ಬಗ್ಗೆ 25 ಪ್ರಕರಣಗಳನ್ನು ಈ ಕಾರ್ಯಾಚರಣೆಯಂತೆ ದಾಖಲಿಸಲಾಗಿದೆ.
ವಾಹನಗಳಲ್ಲಿ ಅಮಿತ ಬಾರ ಹೇರಿದ ಬಗ್ಗೆ 11 ಕೇಸುಗಳನ್ನೂ ದಾಖಲಿಸಲಾಗಿದೆ. ಕಳವು ಪ್ರಕರಣಗಳಿಗೆ ಸಂಬಂಧಿಸಿ ವಿವಿಧೆಡೆಗಳಲ್ಲಾಗಿ 12 ದಾಳಿಗಳನ್ನು ನಡೆಸಲಾಗಿದೆ. 89 ವಾರೆಂಟ್ ಆರೋಪಿಗಳನ್ನು ಬಂಧಿಸಲಾಗಿದೆ.