ಕಂಪೆನಿ ಹೆಸರಲ್ಲಿ 18 ಲಕ್ಷ ರೂ. ಪಡೆದು ವಂಚನೆ: ಕೇಸು ದಾಖಲು
ಕುಂಬಳೆ: ಖಾಸಗಿ ಸಂಸ್ಥೆಯೊಂದರ ಹೆಸರಲ್ಲಿ 18 ಲಕ್ಷರೂಪಾಯಿ ಠೇವಣಿ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೆರುವಾಡ್ ಅರಣಾಲಯಂ ಹೌಸ್ನ ಸಹ ದೇವನ್ (31) ಎಂಬವರು ಈಬಗ್ಗೆ ದೂರು ನೀಡಿದ್ದಾರೆ. ಇದರಂತೆ ಇಬ್ಬರ ವಿರುದ್ಧ ಕೇಸು ದಾಖಲಿ ಸಲಾಗಿದೆ. 2024 ಮಾರ್ಚ್ 25ರಿಂದ ಮೇ 22ರ ವರೆಗಿನ ಕಾಲಾವಧಿಯಲ್ಲಿ ಕಂಪೆನಿ ಯೊಂದರ ಶೇರ್ನ ಹೆಸರಲ್ಲಿ ಇಬ್ಬರು ವ್ಯಕ್ತಿಗಳು ಇವರಿಂದ ಹಣ ಪಡೆದುಕೊಂ ಡಿರುವುದಾಗಿ ತಿಳಿಸಲಾಗಿದೆ.