ಕಂಬಾರು ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ
ಪೆರ್ಮುದೆ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠೆ ಅಂಗವಾಗಿ ನಿನ್ನೆ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಕುಡಾಲು-ಬಾಡೂರು ಗ್ರಾಮ ನಿವಾಸಿಗಳು, ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆದಿದೆ. ಕ್ಷೇತ್ರ ಆಡಳಿತ ಸಮಿತಿ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ನೇತೃತ್ವ ನೀಡಿದರು. ಮೆರವಣಿಗೆ ಪೆರ್ಮುದೆ ಸಂತ ಲಾರೆನ್ಸ್ ಚರ್ಚ್ ಮುಂಭಾಗಕ್ಕೆ ತಲುಪಿದಾಗ ಧರ್ಮಗುರುಗಳು, ಪದಾಧಿಕಾರಿಗಳು ಇಗರ್ಜಿ ವತಿಯಿಂದ ಹೊರೆಕಾಣಿಕೆ ಸಾಮಗ್ರಿಗಳನ್ನು ತಲುಪಿಸಿ ಸೌಹಾರ್ದತೆ ಮೆರೆದರು.