ಕಟ್ಟಡದಿಂದ ಬಿದ್ದು ವ್ಯಾಪಾರಿ ಸಾವಿಗೀಡಾದ ಪ್ರಕರಣ: ಗುತ್ತಿಗೆದಾರನ ಬಂಧನ ಬೆನ್ನಲ್ಲೇ ಪುತ್ರ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಅದರ ಮಾಲಕನಾದ ವ್ಯಾಪಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸೆರೆಗೀಡಾದ ಗುತ್ತಿಗೆದಾರನ ಪುತ್ರ ಕೆರೆಯಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪುಲ್ಲೂರು ಪುಳಿಕ್ಕಾಲ್‌ನ ನರೇಂದ್ರನ್ ಎಂಬವರ ಪುತ್ರ ಕಾಶೀನಾಥನ್ (17) ಮೃತಪಟ್ಟ ದುರ್ದೈವಿಯಾಗಿದ್ದಾನೆ.
ನಿನ್ನೆ ಸಂಜೆ ಕಾಶೀನಾಥನ್ ನಾಪತ್ತೆಯಾಗಿದ್ದನು. ಈ ಹಿನ್ನೆಲೆ ಯಲ್ಲಿ ಸಂಬಂಧಿಕರು ಶೋಧ ನಡೆಸು ತ್ತಿದ್ದ ವೇಳೆ ಪುಲ್ಲೂರು ಕ್ಷೇತ್ರ ಸಮೀ ಪದ ಕೆರೆ ಬಳಿ ಕಾಶೀನಾಥನ್‌ನ ಬಟ್ಟೆಬರೆ, ಚಪ್ಪಲಿ ಕಂಡುಬಂದಿತ್ತು. ಇದರಿಂದ ನಾಗರಿಕರು ಹಾಗೂ ಅಗ್ನಿಶಾಮಕದಳ ನಡೆಸಿದ ಶೋಧ ವೇಳೆ ರಾತ್ರಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಞಂ ಗಾಡ್‌ನ ಜಿಲ್ಲಾ ಆಸ್ಪತ್ರೆಗೆ ತಲುಪಿಸಲಾ ಯಿತು. ಅಲ್ಯುಮಿ ನಿಯಂ ಫ್ಯಾಬ್ರಿಕೇ ಶನ್ ಮಾಲಕನಾದ ವೆಳ್ಳಿಕೋತ್ ನಿವಾಸಿ ರೋಯ್ ಜೋಸೆಫ್ (48) ಈ ತಿಂಗಳ ೩ರಂದು ಮಧ್ಯಾಹ್ನ ಮಾವುಂಗಾಲ್ ಮೂಲಕಂ ಡದಲ್ಲಿ ನಿರ್ಮಿಸುವ ಮೂರಂತಸ್ತಿನ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದರು. ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದ ಇವರು ಮೊನ್ನೆ ಬೆಳಿಗ್ಗೆ ಮೃತಪಟ್ಟಿ ದ್ದರು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ರೋಯ್ ಜೋಸೆಫ್ ಹಾಗೂ ಗುತ್ತಿಗೆದಾರ ನರೇಂದ್ರನ್ ಮಧ್ಯೆ ಕಟ್ಟಡದ ಮೂರನೇ ಅಂತಸ್ತಿನಲ್ಲಿ ವಾಗ್ವಾದ ಉಂಟಾಗಿತ್ತೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿತ್ತು.
ಇದೇ ವೇಳೆ ರೋಯ್ ಜೋಸೆಫ್‌ರನ್ನು ಕಟ್ಟಡದ ಮೇಲಿಂದ ನರೇಂದ್ರನ್ ದೂಡಿ ಹಾಕಿದ್ದನೆಂದು ರೋಯ್ ಜೋಸೆಫ್‌ರ ಪತ್ನಿ ಆರೋಪಿಸಿದ್ದರು. ಇದರಿಂದ ಪೊಲೀಸರು ನರೇಂದ್ರನ್ ವಿರುದ್ಧ ಮನಃಪೂರ್ವಕವಲ್ಲದ ನರಹತ್ಯೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದರು. ನರೇಂದ್ರನ್‌ನ ಬಂಧನದ ಬೆನ್ನಲ್ಲೇ ಪುತ್ರ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಮೃತ ಬಾಲಕ ತಾಯಿ ರೇಣುಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಬಾಲಕನ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.