ಕಡಂಬಾರು ಮಖಾಂ ಉರೂಸ್: ಧಾರ್ಮಿಕ ಪ್ರವಚನ ಜನವರಿ 1ರಿಂದ
ಕುಂಬಳೆ: ಕಡಂಬಾರು ವಲಿಯುಲ್ಲಾಹಿ ಹಾಜಿಯಾರ್ ಉಪ್ಪಾಪ ಮಖಾಂ ಉರೂಸ್ ಹಾಗೂ 11 ದಿನದ ಧಾರ್ಮಿಕ ಪ್ರವಚನ ಜನವರಿ 1ರಿಂದ 12ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆ ಯಲಿದೆ. 1ರಂದು 4 ಗಂಟೆಗೆ ಅತ್ತಾವುಲ್ಲ ತಂಙಳ್ ಧ್ವಜಾರೋಹಣಗೈಯ್ಯುವರು. ಕುಂಬೋಳ್ ಕೆ.ಎಸ್. ಆಟ್ಟಕೋಯ ತಂಙಳ್ ಮಖಾಂ ಸಿಯಾರತ್‌ಗೆ ನೇತೃತ್ವ ನೀಡುವರು. ರಾತ್ರಿ ಕೆ.ಜೆ. ಜಾಫರ್ ಸಾದಿಕ್ ತಂಙಳ್ ಧಾರ್ಮಿಕ ಪ್ರವಚನ ಉದ್ಘಾಟಿಸುವರು. ಜಮಾಯತ್ ಅಧ್ಯಕ್ಷ ಅಬೂಬಕ್ಕರ್ ಹೊಸಮನೆ ಅಧ್ಯಕ್ಷತೆ ವಹಿಸುವರು. ಅಬ್ಬಾಸ್ ದಾರಿಮಿ ಪ್ರಸ್ತಾಪಿಸುವರು. ಹಾಫೀಲ್ ಮಸೂದ್ ಸಖಾಫಿ ಪ್ರಧಾನ ಭಾಷಣ ಮಾಡುವರು. ಬಳಿಕದ ದಿನಗಳಲ್ಲಿ ಅಬ್ದುಲ್ ರಹಿಮಾನ್ ಅಲ್‌ಬುಖಾರಿ, ಹಂಸ ಮಿಸ್‌ಬಾಹಿ, ಇಬ್ರಾಹಿಂ ಬಾತಿಷ, ಸುಹೈಬುಲ್ ಹೈತಮಿ, ಸಂಶುದ್ದೀನ್ ತಂಙಳ್ ಮೊದಲಾದವರು ಪ್ರವಚನ ನೀಡುವರು. ೪ರಂದು ಸಂಜೆ 6.30ಕ್ಕೆ ಮದನೀಯಂ ಮಜ್ಲಿಸ್‌ಗೆ ಲತೀಫ್ ಸಖಾಫಿ ಕಾಂತಪುರಂ, 7ರಂದು ರಾತ್ರಿ 8.30ಕ್ಕೆ ನೂರ್‌ಅಜ್ ಮಿರ್ ಮಜ್ಲಿಸ್‌ಗೆ ವಲಿಯುದ್ದೀನ್ ಫೈಸಿ ನೇತೃತ್ವ ನೀಡುವರು. 10ರಂದು ಅಪರಾಹ್ನ 2.30ಕ್ಕೆ ಮಾನವ ಸೌಹರ್ದ ಸಂಗಮ ನಡೆಯಲಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಸಹಿತ ಹಲವರು ಭಾಗವಹಿಸುವರು. 11ರಂದು ರಾತ್ರಿ 7.30ಕ್ಕೆ ಸಮಾರೋಪ ಸಮಾರಂಭ ಜರಗಲಿದ್ದು, ಸಮಸ್ತ ಅಧ್ಯಕ್ಷ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಮುದರಿಸ್ ಎಂ.ಪಿ. ಮುಹಮ್ಮದ್ ಸಅದಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮೊದಲಾದವರು ಭಾಗವಹಿಸುವರೆಂದು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿ ಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ.