ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷಾರ್ಚನೆ ನ. ೧೯ರಂದು
ಮಂಜೇಶ್ವರ: ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವ ಸ್ಥಾನದಲ್ಲಿ ನವೆಂಬರ್19ರAದು ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಗಳವರ ನೇತೃತ್ವದಲ್ಲಿ ಮತ್ತು ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಾಮೂಹಿಕ ಲಕ್ಷಾರ್ಚನೆ ನಡೆಯಲಿದೆ. ನ.17ರಂದು ರಂದು ಸಂಜೆ 4ಕ್ಕೆ ಪವಿತ್ರ ತುಳಸೀದಳಯುಕ್ತ ಹಸಿರು ಹೊರೆ ಕಾಣಿಕೆ ನಡೆಯಲಿದೆ. 19ರಂದು ಬೆಳಿಗ್ಗೆ 7ಕ್ಕೆ ಗಣ ಹೋಮ, 7:30ಕ್ಕೆ ನವಕ ಕಲಶಾಭಿಷೇಕ, 8ಕ್ಕೆ ಲಕ್ಷಾರ್ಚನೆ ಪ್ರಾರಂಭ 11:30ಕ್ಕೆ ಸಾಮೂಹಿಕ ಭಗವದ್ಗೀತೆ ಪಾರಾಯಣ, 11:40ಕ್ಕೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಚನ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಕ್ಷೇತ್ರದ ಪುನ: ಪ್ರತಿಷ್ಟಾ ಬ್ರಹ್ಮಕಲ ಶೋತ್ಸವದ ಪೂರ್ವಭಾವಿಯಾಗಿ ನಡೆದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದ 1001 ನೇ ದಿವಸದ ಸಲುವಾಗಿ ಈ ಕಾರ್ಯಕ್ರಮ ನಡೆಯಲಿದೆ.