ಕಡಿದು ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ರಾಜ್ಯದ ಮೂರೆಡೆಗಳಲ್ಲಾಗಿ ವಿದ್ಯಾರ್ಥಿ ಸೇರಿ ಮೂವರು ಮೃತ್ಯು
ಕಾಸರಗೋಡು: ಕಡಿದು ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವಿವಿಧೆಡೆಗಳಲ್ಲಿ ಮೂರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಮಲಪ್ಪುರಂ ವಂಙಾರ ಎಂಬಲ್ಲಿ ಸ್ನೇಹಿತರ ಜೊತೆ ನಿನ್ನೆ ಸಂಜೆ ಸ್ನಾನಕ್ಕೆಂದು ತೋಡಿನ ನೀರಿಗಿಳಿದ ಅಲ್ಲಿನ ನಿವಾಸಿ ವಿದ್ಯಾರ್ಥಿ ಅಬ್ದುಲ್ ವದೂದ್ (17) ಅಲ್ಲೇ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದನು. ಮೃತನು ವಂಙಾರ ಇಹ್‌ಸಾನ್ ಇಂಗ್ಲಿಷ್ ಮಾಧ್ಯಮ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಇದೇ ರೀತಿ ತಿರುವನಂತಪುರ ಆಟಿಂಗಾಲ್‌ನ ಅಲಂಕೋಡ್ ಕುರುವಿಳ ವೀಟಿಲ್ ಲೀಲಮ್ಮ (85) ಎಂಬವರು ನಿನ್ನೆ ಬೆಳಿಗ್ಗೆ ಮನೆ ಪಕ್ಕ ಹಿತ್ತಿಲಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್‌ತಗಲಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಪಾಲಕ್ಕಾಡ್ ಓಲಶ್ಶೇರಿಯ ಪಾಳಯಂ ಮಾಂಮುತ್ತ (75) ನಿನ್ನೆ ಬೆಳಿಗ್ಗೆ ತಮ್ಮ ಕೃಷಿ ತೋಟಕ್ಕೆ ತೆಂಗಿನ ಕಾಯಿ ಹೆಕ್ಕಲೆಂದು ಹೋದಾಗ ಅಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಕಾರುಣವಾಗಿ ಸಾವನ್ನಪ್ಪಿದ್ದಾರೆ.