ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವ:  ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ನಾಳೆ ಸಭಾ ಭವನ ಉದ್ಘಾಟನೆ

ಕುಂಬಳೆ:  ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಧಾರ್ಮಿಕ ಸಭೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಒಳವೇದಿಕೆಯಲ್ಲಿ ಇಂದು ಸಂಜೆ ೪.೩೦ರಿಂದ  ಭಜನಾ ಝೇಂಕಾರ್, ೬.೩೦ಕ್ಕೆ ಅನಿಲ್‌ಕೃಷ್ಣ ಕುಂಬಳೆ ಬಳಗದಿಂದ ವಯಲಿನ್ ಸೋಲೋ ನಡೆಯಲಿದೆ.

ಹೊರವೇದಿಕೆಯಲ್ಲಿ ಇಂದು ಮಧ್ಯಾಹ್ನ ಗಂಟೆ ೧ರಿಂದ ಡಾ| ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ  ಸಾಂಸ್ಕೃತಿಕ ಸಂಘ ಕಾಸರಗೋಡು  ಇವರಿಂದ ಸಾಹಿತ್ಯ-ಗಾನ-ನೃತ್ಯ ವೈಭವ ನಡೆಯಲಿದೆ. ಸುಮಾರು ೪೦ಕ್ಕೂ ಹೆಚ್ಚು ಕಲಾವಿ ದರು ಇದರಲ್ಲಿ ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಅವನಿ ಎಂ.ಎಸ್ ಸುಳ್ಯ, ಸನುಷಾ ಸುನಿಲ್, ಶ್ವೇತಾ ಯು.ವೈ. ನೆಲ್ಯಾಡಿ ಇವರಿಗೆ ಕಲಾ ಚೈತನ್ಯ ಬಿರುದು ನೀಡಿ ಗೌರವಿಸಲಾಗುವುದೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ತಿಳಿಸಿದ್ದಾರೆ. ಸಂಜೆ ೫.೩೦ರಿಂದ ಸಿದ್ದಿವಿನಾಯಕ ಯಕ್ಷನಾಟ್ಯ ಕಲಾಕೇಂದ್ರ ಕೃಷ್ಣಾಪುರ ಸುರತ್ಕಲ್  ಇವರಿಂದ ಮಕ್ಕಳ ಯಕ್ಷಗಾನ ಪ್ರದರ್ಶನ, ರಾತ್ರಿ ೭.೩೦ರಿಂದ ಶ್ವೇತಾ ನಾಗೇಶ್ ಚೆನ್ನೈ ಇವರಿಂದ ಕೂಚುಪುಡಿ ನೃತ್ಯ, ೮.೪೦ರಿಂದ ವಿದುಷಿ ರಾಧಿಕಾ ಕಲ್ಲೂರಾಯ ಬೆಂಗಳೂರು ಇವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.  ನಾಳೆ ಬೆಳಿಗ್ಗೆ  ೭ರಿಂದ ಭಜನಾ  ಝೇಂಕಾರ್ ನಡೆಯಲಿದೆ. ೯.೩೦ಕ್ಕೆ ಸಭಾ ಭವನದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಿರ್ವಹಿಸುವರು.  ೧೦ ಗಂಟೆಗೆ  ನಡೆಯುವ ಧಾರ್ಮಿಕ ಸಭೆಯಲ್ಲಿ   ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡುವರು. ಉದ್ಯಮಿ ಕುಳೂರು ಕನ್ಯಾನ ಸದಾಶಿವಶೆಟ್ಟಿ ಅಧ್ಯಕ್ಷತೆ ವಹಿಸುವರು.  ಕ್ಷೇತ್ರದ ಪವಿತ್ರಪಾಣಿ ಡಾ| ವಿಕ್ರಂ ಇರ್ನೀರಾಯ, ಶ್ರೀ ರವೀಶತಂತ್ರಿ ಕುಂಟಾರು, ಬಡಾಜೆ ಶ್ರೀ ಗೋಪಾಲಕೃಷ್ಣ ತಂತ್ರಿ, ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ, ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ ಸಹಿತ ಹಲವರು ಉಪಸ್ಥಿತರಿರುವರು. ಮಲಬಾರ್ ದೇವಸ್ವಂ ಮಂಡಳಿ ಅಧ್ಯಕ್ಷ ಎಂ.ಆರ್. ಮುರಳಿ ಅವರು ಸ್ಮರಣ ಸಂಚಿಕೆ ‘ಸುದರ್ಶನ’ ಬಿಡುಗಡೆಗೊಳಿಸುವರು. ಒಳವೇದಿಕೆ ಯಲ್ಲಿ ಬೆಳಿಗ್ಗೆ ೭ರಿಂದ, ಸಂಜೆ ೪ರಿಂದ ಭಜನಾ ಝೇಂಕಾರ್, ರಾತ್ರಿ ೭ಕ್ಕೆ ವಿದುಷಿ ಚಿತ್ತರಂಜಿನಿ ಭಟ್, ವಿದುಷಿ ವಿಜಯಲಕ್ಷ್ಮಿ ಭಟ್ ಕುಂಬಳೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,  ಹೊರ ವೇದಿಕೆಯಲ್ಲಿ ಬೆಳಿಗ್ಗೆ ೧೧ಕ್ಕೆ  ಕರಂದಕಾಡು ಯೋಗ ಫಾರ್ ಕಿಡ್ಸ್‌ನ ಬಿದುನ್ ಬೈಜು ಮತ್ತು ತಂಡದಿಂದ ಯೋಗ ಪ್ರದರ್ಶನ, ೧೧.೩೦ರಿಂದ ಅನ್ನದಾಸೋಹ, ತೃಶೂಲ್ ಕ್ರಿಕೆಟರ್ಸ್ ಕುಂಬಳೆ ಪ್ರಾಯೋಜಿ ಸುವ ಯಕ್ಷಗಾನ  ವೈಭವ, ಮಧ್ಯಾಹ್ನ ೧.೩೦ರಿಂದ ಸೌ ಮ್ಯಶ್ರೀಕಾಂತ್ ಮಧೂರು ನಿರ್ದೇ ಶನದಲ್ಲಿ ನಾಟ್ಯ ಮಂಟಪ ಮಧೂರು ತಂಡದಿಂದ ನಾಟ್ಯಾರ್ಚನೆ, ಸಂಜೆ ೬ರಿಂದ ಆರ್ಟ್ ಆಫ್ ಲಿವಿಂಗ್ ಬಳಗದಿಂದ ಮಹಾಸತ್ಸಂಗ, ರಾತ್ರಿ ೮.೩೦ರಿಂದ ಕಲಾ ಸಂಗಮ ಕಲಾವಿದ ರಿಂದ ತುಳುನಾಟಕ ‘ಶಿವದೂತೆ ಗುಳಿಗೆ’  ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page