ಕಣ್ಣೂರಿನಲ್ಲೂ  ಮಾವೋವಾದಿ ಮತ್ತು ತಂಡರ್ ಬೋಲ್ಟ್ ಮಧ್ಯೆ ಗುಂಡಿನ ಚಕಮಕಿ

ಕಣ್ಣೂರು: ಮಾನಂತವಾಡಿ ದಟ್ಟಾರಣ್ಯದಲ್ಲಿ ನ. ೭ರಂದು ರಾತ್ರಿ ನಡೆದ ಗುಂಡಿನ ಚಕಮಕಿಯ ಬೆನ್ನಲ್ಲೇ ಕಣ್ಣೂರು ಜಿಲ್ಲೆಯ   ಅಧಿಕುನ್ನು ದಟ್ಟಾರಣ್ಯದಲ್ಲಿ ಇಂದು ಮುಂಜಾನೆ ಮಾವೋವಾದಿಗಳು ಮತ್ತು ಪೊಲೀಸ್ ಇಲಾಖೆಯ ತಂಡರ್ ಬೋಲ್ಟ್ ಪಡೆ ಮಧ್ಯೆ ತೀವ್ರ ಗುಂಡಿನ ಚಕಮಕಿ ನಡೆದಿದೆ.  ಆದರೆ ಈ ವಿಷಯದ ಬಗ್ಗೆ ಹೆಚ್ಚಿನ  ಮಾಹಿತಿ ಹೊರಬಂದಿಲ್ಲ. ಮಾನಂv ವಾಡಿ ಯಲ್ಲಿ ನಡೆದ  ಗುಂಡಿನ ಚಕಮಕಿ ಯಲ್ಲಿ  ಓರ್ವ ಮಾವೋ ವಾದಿಗೆ ಗುಂಡು ತಗಲಿತ್ತು. ಅಲ್ಲಿದ್ದ ಮೂವರು ಮಾವೋವಾದಿಗಳು ಪರಾರಿಯಾಗಿ ದ್ದರು. ಮಾತ್ರವಲ್ಲ ಮಾವೋವಾದಿಗ ಳಾದ ಚಂದ್ರನ್ ಮತ್ತು ಉಣ್ಣಿಮಾಯ ಎಂಬವರನ್ನು ಅಂದು ದಸ್ತಗಿರಿಗೈದಿ ದ್ದರು.  ಅದರ ಬೆನ್ನಲ್ಲೇ ಕಣ್ಣೂರಿನಲ್ಲೂ ಇಂದು ಬೆಳಿಗ್ಗೆ ಮಾವೋವಾದಿಗಳು ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

You cannot copy contents of this page