ಕಣ್ಣೂರು ಎಡಿಎಂ ಆತ್ಮಹತ್ಯೆ: ತನಿಖೆಗೆ ಚಾಲನೆ
ಪತ್ತನಂತಿಟ್ಟ: ಕಣ್ಣೂರಿನ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಎಡಿಎಂ ನವೀನ್ ಬಾಬು ಅವರ ಸಾವಿನ ಕುರಿತು ತನಿಖೆಗೆ ನಿರ್ಧರಿಸಲಾಗಿದೆ. ನವೀನ್ ಬಾಬು ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯಾರಿಂದ ತನಿಖಾ ತಂಡ ಹೇಳಿಕೆ ದಾಖಲಿಸಿಕೊಳ್ಳಲಿದೆ. ತನಿಖೆಯ ಅಂಗವಾಗಿ ಕಣ್ಣೂರು ಪೊಲೀಸರು ಪತ್ತನಂತಿಟ್ಟಕ್ಕೆ ತೆರಳುವರು.
ಇದೇ ವೇಳೆ ನವೀನ್‌ಬಾಬುರ ಅಂತ್ಯ ಸಂಸ್ಕಾರ ಇಂದು ಪತ್ತನಂತಿಟ್ಟ ಮಲೆಯಾಲಪುಳದ ಮನೆ ಹಿತ್ತಿಲಿನಲ್ಲಿ ನಡೆಯಲಿರುವುದು.