ಕಣ್ಣೂರು ಜಿಲ್ಲಾಧಿಕಾರಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ಸಚಿವ ಕೆ. ರಾಜನ್ ನಿರ್ಧಾರ
ಕಣ್ಣೂರು: ಕಣ್ಣೂರು ಎಡಿಎಂ ನವೀನ್‌ಬಾಬು ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಕ್ಕೆಡೆಯಾದ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಂದಾಯ ಸಚಿವ ಕೆ. ರಾಜನ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ನಾಳೆ ಕಂದಾಯ ಇಲಾಖೆಗೆ ಸಂಬಂಧ ಪಟ್ಟು ಕಣ್ಣೂರು ಜಿಲ್ಲೆಯಲ್ಲಿ ನಡೆಯಬೇಕಿದ್ದ ಎರಡು ಪಟ್ಟಾ ಮೇಳ ಸಹಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಗಳಲ್ಲಿ ಜಿಲ್ಲಾಧಿಕಾರಿ ಭಾಗವಹಿಸಲಿದ್ದು, ಹಾಗಿರುವಾಗ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ತಾನು ಪಾಲ್ಗೊಳ್ಳುವುದು ಸರಿಯಲ್ಲ ಎಂಬ ನಿಲುವು ಸಿಪಿಐ ನೇತಾರನಾದ ಸಚಿವ ಕೆ. ರಾಜನ್ ಹೊಂದಿದ್ದಾರೆ. ಇದೇ ವೇಳೆ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್‌ರನ್ನು ಕಣ್ಣೂರಿನಿಂದ ಬದಲಾಯಿಸಬೇಕೆಂಬ ಬೇಡಿಕೆಯನ್ನು ಸಚಿವ ರಾಜನ್ ಮುಂದಿರಿಸಲಿದ್ದಾರೆಂಬ ಸೂಚನೆಯಿದೆ.