ಕಣ್ಣೂರು ಜಿಲ್ಲೆಯಲ್ಲಿ ಐದು ವರ್ಷದಲ್ಲಿ ಪತ್ತೆಯಾಗಿದ್ದು 252 ಬಾಂಬ್‌ಗಳು
ಕಣ್ಣೂರು: ಅಕ್ರಮ ನಾಡಬಾಂಬ್‌ಗಳ ನಿರ್ಮಾಣ ಕೇಂದ್ರವೆಂದೇ ಕುಖ್ಯಾತಿ ಪಡೆದಿರುವ ಕಣ್ಣೂರು ಜಿಲ್ಲೆಯ ವಿವಿಧೆಡೆಗಳಲ್ಲಿ ಪೊಲೀಸರು ಕಳೆದ ಐದು ವರ್ಷಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ 252 ನಾಡ ನಿರ್ಮಿತ ಬಾಂಬ್‌ಗಳನ್ನು ಪತ್ತೆ ಹಚ್ಚಿದ್ದಾರೆ. ರಾಜಕೀಯ ಎದುರಾಳಿ ಗಳನ್ನು ಗುರಿಯಾಗಿಸಿಕೊಂಡು ಹಾಗೂ ರಾಜಕೀಯ ಹಗೆತನ ತೀರಿಸಿಕೊಳ್ಳಲು ಇಂತಹ ಬಾಂಬ್‌ಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ಮಾತ್ರವಾಗಿ 15 ನಾಡ ಬಾಂಬ್‌ಗಳನ್ನು ಬಾಂಬ್ ನಿಷ್ಕ್ರಿಯ ಪಡೆ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದೆ.
ಕಣ್ಣೂರು ಜಿಲ್ಲೆಯ ತಲಶ್ಶೇರಿ, ಪಾನೂರು ಮತ್ತು ಕೂತುಪರಂಬ ಎಂ ಬೆಡೆಗಳಲ್ಲಿ ಅತೀ ಹೆಚ್ಚು ನಾಡ ಬಾಂಬ್ ಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಹೆಚ್ಚಾಗಿ ಸ್ಟೀಲ್ ಬಾಂಬ್‌ಗಳಾಗಿವೆ.
1998ರ ಬಳಿಕ ಕಣ್ಣೂರು ಜಿಲ್ಲೆ ಯಲ್ಲಿ ನಾಡ ಬಾಂಬ್ ನಿರ್ಮಾಣದ ವೇಳೆ ಅದು ಆಕಸ್ಮಾತ್ ಸ್ಫೋಟ ಗೊಂಡು 10 ಮಂದಿ ಸಾವನ್ನಪ್ಪಿದ್ದಾರೆ. ಹೀಗೆ ಮಡಿದವರಲ್ಲಿ ಆರು ಮಂದಿ ಸಿಪಿಎಂ ಕಾರ್ಯಕರ್ತರಾಗಿದ್ದಾರೆ.
ನಿರ್ಜನ ಪ್ರದೇಶಗಳ ಜನವಾಸವಿಲ್ಲದ ಮನೆಗಳು ಮತ್ತು ಕಟ್ಟಡಗಳಲ್ಲಿ ನಾಡಬಾಂಬ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಂತಹ ಕಟ್ಟಡಗಳು, ಮನೆಗಳು ಮತ್ತು ಇತರ ಹಲವು ಗುಪ್ತ ಕೇಂದ್ರಗಳಲ್ಲಿ ಅದೆಷ್ಟೋ ನಾಡ ಬಾಂಬ್‌ಗಳನ್ನು ನಿರ್ಮಿಸಿ ದಾಸ್ತಾನು ಇರಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿಗಳೂ ಪೊಲೀಸರಿಗೆ ಲಭಿಸಿದೆ.
ಅವುಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ದೈನಂದಿನ ಎಲ್ಲಾ ಶಂಕಿತ ಕೇಂದ್ರಗಳಿಗೆ ಸಾಗಿ ಶಧ ನಡೆಸುತ್ತಿದೆ.