ಕಣ್ವತೀರ್ಥ ಬೀಚ್ ರಸ್ತೆ ಮುಖ್ಯಮಂತ್ರಿಯಿಂದ ಉದ್ಘಾಟನೆ
ಮಂಜೇಶ್ವರ: ಕೇರಳ ಸರಕಾ ರದ ಅಭಿವೃದ್ಧಿ ಯೋಜನೆಯಂಗವಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಲಭಿಸಿದ 2 ಕೋಟಿ 37 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡ 1340 ಮೀಟರ್ ಉದ್ದದ ಕಣ್ವತೀರ್ಥ ಬೀಚ್ ರಸ್ತೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‌ಲೈನ್ ಮೂಲಕ ಲೋಕಾರ್ಪಣೆಗೊಳಿ ಸಿದರು. ರಾಜ್ಯದ ೧೪ ಜಿಲ್ಲೆಗಳಲ್ಲಿ 60 ರಸ್ತೆಗಳನ್ನು ಒಂದೇ ದಿನದಲ್ಲಿ ಮುಖ್ಯ ಮಂತ್ರಿ ಲೋಕಾ ರ್ಪಣೆಗೊಳಿಸಿದ್ದಾರೆ. ಲೋಕೋ ಪಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಮೊಹಮ್ಮದ್ ರಿಯಾಸ್ ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್ ಉದ್ಘಾಟನಾ ಫಲಕ ಅನಾವರಣ ಗೊಳಿಸಿದರು. ಈ ಸಂದರ್ಭ ಮಂಜೇಶ್ವರ ಪಂಚಾ ಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಜನಪ್ರತಿ ನಿಧಿಗಳಾದ ಯಾವದ ಬಡಾಜೆ, ಸುಪ್ರಿಯಾ ಶೆಣೈ, ವಿನಯ ಭಾಸ್ಕರ್, ಲಕ್ಷ್ಮಣ ಕುಚ್ಚಿಕ್ಕಾಡ್, ಮುಸ್ತಫ ಉದ್ಯಾವರ, ಆದರ್ಶ್, ನೇತಾರರಾದ ಸಯ್ಯದ್ ಸೈಫುಲ್ಲ ತಂಙಳ್, ಅಶ್ರಫ್ ಕುಂಜತ್ತೂರು ಉಪಸ್ಥಿತರಿದ್ದರು. ಈ ಸಂದರ್ಭ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಹಾಗೂ ಗುತ್ತಿಗೆದಾರ ಯು.ಕೆ. ಮೊಹಮ್ಮದ್‌ರನ್ನು ಸನ್ಮಾನಿಸಲಾಯಿತು. ಬಿಜು ಕೆ ಸ್ವಾಗತಿಸಿ, ಶೋಭ ವಂದಿಸಿದರು.