ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆದುಬರಬೇಕು- ಕ.ಅ.ಪ್ರಾ ನೂತನ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ
ಕಾಸರಗೋಡು: ಕನ್ನಡ ನಾಡಿ ನಲ್ಲಿ ಕನ್ನಡದ ಅಭಿವೃದ್ಧಿಯ ಕಾಯಕ ವೆಂದರೆ ಕೇವಲ ಸಮ್ಮೇಳನಗಳನ್ನು ಮಾಡುವುದಕ್ಕೆ ಸೀಮಿತವಾಗದೆ ಸಮಗ್ರ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಆಮೂಲಾಗ್ರವಾಗಿ ಕನ್ನಡ ಕಟ್ಟುವ ಕೆಲಸ ನಿರಂತರ ನಡೆಯಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಬೆಂಗಳೂರಿನಲ್ಲಿ ನೂತನ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಂಡ ನಂತರ ಸಿನಿಮಾ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರ ಜೊತೆ ಮಾತುಕತೆ ನಡೆಸಿದರು. ಕೇವಲ ಸಮ್ಮೇಳನಗಳನ್ನು ಮಾಡುವುದರ ಮೂಲಕ ರಾಜಧಾನಿಯ ಕೆಲವೊಂದು ಜನರನ್ನು ಮಾತ್ರ ಅತಿಥಿಗಳನ್ನಾಗಿ ಆಹ್ವಾನಿಸಿ ಹೊರನಾಡು, ಗಡಿನಾಡು ಸೇರಿದಂತೆ ಇರುವ ಕನ್ನಡಿಗರು ಸೇವಾ ಮನೋಭಾವದಿಂದ ಅವರ ಕೆಲಸ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಸಮ್ಮೇಳನಗಳು ಮಾತ್ರ ಮುಖ್ಯವಾಗದೆ ಕನ್ನಡದ ಏಳ್ಗೆ ದೃಷ್ಟಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಮಸ್ತ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಕನ್ನಡದ ಜಾಗೃತಿಯನ್ನು ಮೂಡಿಸಿ ಕನ್ನಡ ವಾತಾವರಣವನ್ನು ಸೃಷ್ಟಿಸುವ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ನನ್ನ ಅವಧಿಯಲ್ಲಿ ವಿಸ್ತೃತವಾದ ಕಾರ್ಯ ಯೋಜನೆಗಳನ್ನು ರೂಪಿಸಿ ಕನ್ನಡಿ ಗರೆಲ್ಲರೂ ಕನ್ನಡಕ್ಕಾಗಿ ದುಡಿಯುವಂತೆ ಪ್ರಯತ್ನಿಸಲಾಗುವುದು. ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳ ಮಳಿಗೆಗಳನ್ನು ಅಲ್ಲಲ್ಲಿ ತೆರೆದು ಕನ್ನಡಿಗರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಹೊರ ತಂದ ಕನ್ನಡ ಕೃತಿಗಳು ಲಭ್ಯವಾಗುವಂತೆ ಮಾಡಲು ಚಿಂತನೆ ನಡೆÀದಿದೆ ಎಂದರು. ಇದೇ ವೇಳೆ ಬಿ.ಎನ್. ಸುಬ್ರಹ್ಮಣ್ಯ, ಡಾ. ಸದಾನಂದ ಪೆರ್ಲ ಬಿಳಿಮಲೆಯ ವರನ್ನು ಅಭಿನಂದಿಸಿದರು.