ಕನ್ನಡ ಭಾಷೆಗೆ ಇನ್ನೊಂದು ಪೆಟ್ಟು: ಭೂದಾಖಲೆಗಳ ದತ್ತಾಂಶ ಮಲೆಯಾಳ ಭಾಷೆಗೆ ಮಾತ್ರ ಸೀಮಿತ: ಸರಕಾರದ ಅಧಿಸೂಚನೆ ಹಿಂತೆಗೆಯಲು ಶಾಸಕ ಎಕೆಎಂ ಮನವಿ
ಕಾಸರಗೋಡು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭೂ ದಾಖಲೆಗಳ ದತ್ತಾಂಶ ಇಂಗ್ಲಿಷ್ ಹೊರತುಪಡಿಸಿ ಮಲೆಯಾಳಂ ನಲ್ಲಿ ಮಾತ್ರ ಮಾಡಬೇಕು ಎಂಬ ನೋಂ ದಾವಣೆ ಇಲಾಖೆಯ ಹೊಸ ಅಧಿಸೂ ಚನೆಯು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಕನ್ನಡಿಗರಿಗೆ ಸಮಸ್ಯೆಯಾಗಲಿದೆಯೆಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದು, ಇದನ್ನು ಹಿಂತೆಗೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಮಂಜೇಶ್ವರ, ಬದಿಯಡ್ಕ, ಕಾಸರಗೋಡು ಸಬ್ ರಿಜಿಸ್ಟ್ರಾರ್ ವ್ಯಾಪ್ತಿ ಯಲ್ಲಿರುವ ಹೆಚ್ಚಿನ ಭೂ ದಾಖಲೆಗಳು ಕನ್ನಡ ಭಾಷೆಯಲ್ಲಿದೆ. ಕನ್ನಡ ಅಲ್ಪ ಸಂಖ್ಯಾತರು ತಮ್ಮ ಭೂ ದಾಖಲೆಗಳ ದಸ್ತಾವೇಜು, ದತ್ತಾಂಶವೆಲ್ಲವನ್ನೂ ಕನ್ನಡದಲ್ಲಿಯೇ ದಾಖಲಿಸುತ್ತಾರೆ. ಈಗ ಸರಕಾರ ಹೊರಡಿಸಿದ ಹೊಸ ಆದೇಶದಿಂದ ಸಮಸ್ಯೆ ಸೃಷ್ಟಿಯಾಗಲಿದೆ. ಆದುದ ರಿಂದ ಈ ಅಧಿಸೂಚನೆಯನ್ನು ಹಿಂತೆಗೆ ಯಬೇಕೆಂದು ಶಾಸಕ ಎಕೆಎಂ ಅಶ್ರಫ್ ನೋಂದಣಿ ಇಲಾಖೆ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್, ನೋಂದಣಿ ಇಲಾಖೆ ಇನ್‌ಸ್ಪೆಕ್ಟರ್ ಜನರಲ್ ಧನ್ಯಾಸುರೇಶ್‌ರಿಗೆ ಮನವಿ ನೀಡಿದ್ದಾರೆ.
ಗಡಿನಾಡು ಕನ್ನಡ ಪ್ರದೇಶದಲ್ಲಿ ಕನ್ನಡದಲ್ಲಿ ದತ್ತಾಂಶ ನೋಂದಣಿ ಮಾಡಲು ಅವಕಾಶ ನೀಡದಿದ್ದರೆ ಉಂಟಾಗಬಹುದಾದ ಸಮಸ್ಯೆಯ ಬಗ್ಗೆ ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.