ಬದಿಯಡ್ಕ: ಸಂಚಾರ ಯೋಗ್ಯ ವಲ್ಲದ ಕನ್ಯಪ್ಪಾಡಿ-ಪಳ್ಳ ರಸ್ತೆಯ ಶೋಚನೀಯಾವಸ್ಥೆಯನ್ನು ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಎಣ್ಮಕಜೆ, ಬದಿಯಡ್ಕ ಮಂಡಲ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಇದರಂಗವಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಚೆನ್ನೆಕುಂಡ್‌ನಲ್ಲಿ ರಸ್ತೆಯ ಹೊಂಡಗಳಲ್ಲಿ ದೋಣಿ ಇಳಿಸಿ ಪ್ರತಿಭಟನೆ ನಡೆಸಲಾ ಗುವುದು. ಡಿಸಿಸಿ ಪ್ರಧಾನ ಕಾರ್ಯ ದರ್ಶಿ, ಎಣ್ಮಕಜೆ ಪಂಚಾ ಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸುವರು. ನೇತಾರರ ಸಹಿತ ಹಲವರು ಕಾರ್ಯಕರ್ತರು ಭಾಗವಹಿ ಸುವರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.
