ಕಯ್ಯಾರುಗುತ್ತು: ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ, ನೇಮೋತ್ಸವ ನಾಳೆಯಿಂದ
ಉಪ್ಪಳ: ಕಯ್ಯಾರು ಗುತ್ತಿನ ನೂತನ ಚಾವಡಿ ಮತ್ತು ಮನೆಯಲ್ಲಿ ಧರ್ಮದೈವ ಶ್ರೀ ಧೂಮಾವತಿ ಬಂಟ ಮತ್ತು ವuðರ ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ನಾಳೆಯಿಂದ 4ರ ತನಕ ನಡೆಯಲಿದೆ. ನಾಳೆ ಸಂಜೆ 5ಕ್ಕೆ ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ ಹಾಗೂ ವಿವಿಧ ವೈದಿಕÀ ಕಾರ್ಯಕ್ರಮಗಳು, 2ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ನಾಗ ತಂಬಿಲ, ಕಲಶ ಪೂಜೆ ಮೊದಲಾದ ವೈದಿಕ ಕಾರ್ಯಕ್ರಮ, ಸಂಜೆ 6ಕ್ಕೆ ಅಧಿವಾಸ, ದುರ್ಗಾಪೂಜೆ, ಅಧಿವಾಸ ಹೋಮ, 3ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ಕಲಶ ಪೂಜೆ, 10.10ರ ಮೂಹೂರ್ತದಲ್ಲಿ ನೂತನ ಚಾವಡಿಯಲ್ಲಿ ಧರ್ಮದೈವ, ಶ್ರೀ ಧೂಮಾವತಿ ಬಂಟ ದೈವಗಳ ಪುನರ್ ಪ್ರತಿಷ್ಠೆ, ಗುತ್ತು ಮನೆಯಲ್ಲಿ ಕಲುರ್ಟಿ, ಪಂಜುರ್ಲಿ, ಕೊರತಿ, ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಧ್ಯಾಹ್ನ 12.30ರಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಯವರಿಂದ ಆಶೀರ್ವಚನ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಜ್ಯೋತಿಷಿ ಸಜೇಶ್ ಪೊದುವಾಳ್ ಕುಂಬಳೆ ಇವರಿಗೆ ಗೌರವಾರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ, 2ರಿಂದ ಭಜನೆ, ಸಂಜೆ 4ರಿಂದ ಭಕ್ತಿಗಾನ ಸುಧಾ, 6ಕ್ಕೆ ಧರ್ಮದೈವಗಳ ಭಂಡಾರ ಆರೋಹಣ, 7ರಿಂದ ಗುಳಿಗ ದೈವದ ಕೋಲ, ರಾತ್ರಿ ಅನ್ನಸಂತರ್ಪಣೆ, 9ರಿಂದ ಕೊರತಿ, ಕಲ್ಲುರ್ಟಿ, ಪಂಜುರ್ಲಿ ದೈವಗಳ ಕೋಲ, 4ರಂದು ಬೆಳಿಗ್ಗೆ 10ರಿಂದ ಶ್ರೀ ಧೂಮಾವತೀ ಬಂಟ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4ಕ್ಕೆ ಶ್ರೀ ದೈವಗಳ ಭಂಡಾರ ಅವರೋಹಣ ನಡೆಯಲಿದೆ.