ಕಾಸರಗೋಡು: ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕರಂದಕ್ಕಾಡ್ ವಿಶ್ವಕರ್ಮ ಭಜನಾ ಮಂದಿರದಲ್ಲಿ ನಿನ್ನೆ ಯುವಕ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಪೂಜೆ ಜರಗಿತು. ಬೆಳಿಗ್ಗೆ ಧ್ವಜಾರೋಹಣ, ಸಂಜೆ ಭಜನೆ, ಮಹಾಪೂಜೆ ಜರಗಿತು. ಇದೇ ವೇಳೆ ಫಿಂಗರ್ ಡ್ರಮ್ಮರ್‌ನಲ್ಲಿ ಇಂಡಿಯ ಬುಕ್ ಆಫ್ ರೆಕಾರ್ಡ್ ಸಹಿತ ವಿವಿಧ ದಾಖಲೆ ನಿರ್ಮಿಸಿದ ಕೋಟೂರು ಮಣಿಕಂಠ ಆಚಾರ್ಯ, ಚೆರ್ಕಳ ಮಾರ್ತೋಮಾ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ಪ್ರತಿಭೆ ಪೃಥ್ವಿ ಮಹೇಶ್ ಆಚಾರ್ಯರನ್ನು ಅಭಿನಂದಿಸಲಾಯಿತು. ಮಂದಿರದ ಮುಂಭಾಗದಲ್ಲಿ ಮೇಲ್ಛಾವಣಿ ಕೆಲಸ ನಿರ್ವಹಿಸಿದ ಬಾಡೂರು ಲತೀಶ್ ಆಚಾರ್ಯ ಕೂಡ್ಲು ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಅಧ್ಯಕ್ಷತೆ ವಹಿಸಿದರು. ವಿಘ್ನೇಶ್ ಆಚಾರ್ಯ, ಯುವಕ ಸಂಘದ ಅಧ್ಯಕ್ಷ ಶೀತಲ್ ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ವೇದಾವತಿ ಸದಾಶಿವ ಆಚಾರ್ಯ ಭಾಗವಹಿಸಿದರು. ಜೊತೆ ಕಾರ್ಯದರ್ಶಿ ಹರಿಪ್ರಸಾದ್ ಆಚಾರ್ಯ ಸ್ವಾಗತಿಸಿ, ಮಹಿಳಾ ಸಂಘದ ಕಾರ್ಯದರ್ಶಿ ಶ್ರೀವಳ್ಳಿ ಗಣೇಶ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು. ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.
