ಕರುವನ್ನೂರು ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ವಂಚನೆ ಪ್ರಕರಣ: ಇ.ಡಿಯಿಂದ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆ; ಸಿಪಿಎಂನ ಮಾಜಿ ಜಿಲ್ಲಾ ಕಾರ್ಯದರ್ಶಿ, ಸಂಸದ ಆರೋಪಿಗಳು
ಕೊಚ್ಚಿ: ಕೇರಳದಲ್ಲಿ ಭಾರೀ ವಿವಾದ ಸೃಷ್ಟಿಸಿದ ಸಿಪಿಎಂ ನಿಯಂತ್ರಣದಲ್ಲಿರುವ ಕರುವನ್ನೂರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಸಾಲ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ಇಲಾಖೆ (ಇಡಿ) ನ್ಯಾಯಾಲಯದ ಅಂತಿಮ ಚಾರ್ಜ್ ಶೀಟ್ ಸಲ್ಲಿಸಿದೆ.
ಸಿಪಿಎಂನ ಕೇರಳದ ಏಕೈಕ ಸಂಸದ, ಪಕ್ಷದ ಮಾಜಿ ಜಿಲ್ಲಾ ಕಾರ್ಯದರ್ಶಿಯೂ ಆಗಿದ್ದ ಕೆ. ರಾಧಾಕೃಷ್ಣನ್, ಮಾಜಿ ಸಚಿವ, ಪಳ್ಳದ ಮಾಜಿ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯರೂ ಆಗಿರುವ ಎ.ಸಿ.ಮೊಯ್ದೀನ್, ಇನ್ನೋರ್ವ ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ಎಂ. ವರ್ಗೀಸ್ ಎಂಬವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಆರೋಪಿ ಗಳನ್ನಾಗಿ ಹೆಸರಿಸಲಾಗಿದೆ. ಇವರ ಹೊರತಾಗಿ ಸಿಪಿಎಂ ನೇತಾರರಾದ ಎ.ಆರ್. ಪೀತಾಂಬರನ್, ಎಂ.ಬಿ. ರಾಜು,ಕೆ.ಸಿ. ಪ್ರೇಮರಾಜನ್, ಪಿ.ಆರ್. ಅರವಿಂದಾಕ್ಷನ್ ಸೇರಿದಂತೆ ಒಟ್ಟು 83 ಮಂದಿಯನ್ನು ಆರೋಪಿಗಳನ್ನಾಗಿ ಚಾರ್ಜ್ ಶೀಟ್‌ನಲ್ಲಿ ಒಳಪಡಿಸಲಾಗಿದೆ. ಒಟ್ಟು ೮೩ ಮಂದಿ ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ನಿಧನಹೊಂದಿದ್ದರು. ಆರೋಪಿಗಳ ಪೈಕಿ 23 ಮಂದಿಯನ್ನು ಇಡಿ ಈಗಾಗಲೇ ಬಂಧಿಸಿದೆ. ಬಳಿಕ ಅವರೆಲ್ಲರೂ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಇಡಿ ಮೊದಲ ಹಂತದಲ್ಲಿ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಒಟ್ಟು ೫೬ ಮಂದಿಯನ್ನು ಆರೋಪಿಗನ್ನಾಗಿ ಹೆಸರಿಸಿತ್ತು. ನಂತರ ಈಗ ಸಲ್ಲಿಸಿರುವ ಅಂತಿಮ ಚಾರ್ಜ್ ಶೀಟ್‌ನಲ್ಲಿ 27 ಮಂದಿ ಈಗ ಆರೋ ಪಿಗಳನ್ನಾಗಿ ಸೇರ್ಪಡೆಗೊಳಿ ಸಲಾಗಿದೆ.
ಕಾನೂನುಬಾಗಿರವಾಗಿ ಬ್ಯಾಂ ಕ್‌ನಿಂದ ಸಾಲ ಮಂಜೂರು ಮಾಡಲು ಪಕ್ಷ ಮಧ್ಯಸ್ಥಿಕೆ ವಹಿಸಿತ್ತೆಂದೂ, ಪಕ್ಷದ ಫಂಡ್ ಎಂಬ ಹೆಸರಲ್ಲಿ ಅದರ ಪಾಲು ಪಡೆಯಲಾಗಿದೆ ಆ ಹಣವನ್ನು ಠೇವಣಿ ಹೂಡಲು ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಉಪಯೋಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಇಡಿ ಆರೋಪಿಸಿದೆ.