ಕರ್ನಾಟಕದ ಹೆದ್ದಾರಿಯಲ್ಲಿ ಭೂಕುಸಿತ: ನಾಲ್ಕು ದಿನಗಳಿಂದ ಮಣ್ಣಿನಡಿಯಲ್ಲಿ ಸಿಲುಕಿಕೊಂಡ ಕಲ್ಲಿಕೋಟೆಯ ಲಾರಿ ಚಾಲಕ
ಕಲ್ಲಿಕೋಟೆ: ಕರ್ನಾಟಕದ ಬೆಂಗಳೂರು-ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿ ತದಿಂದಾಗಿ ಕಲ್ಲಿಕೋಟೆ ನಿವಾಸಿ ಯಾದ ಲಾರಿ ಚಾಲಕರೊಬ್ಬರು ಕಳೆದ ನಾಲ್ಕು ದಿನಗಳಿಂದ ಮಣ್ಣಿನ ಡಿಯಲ್ಲೇ ಸಿಲುಕಿಕೊಂಡಿದ್ದಾರೆ. ಕಲ್ಲಿಕೋಟೆಯ ಅರ್ಜುನ್ ಎಂಬವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಲಾರಿಯ ಜತೆಗೆ ಮಣ್ಣಿನಡಿಯಲ್ಲಿ ಸಿಲುಕಿಕೊಂಡ ಅರ್ಜುನ್‌ರ ಫೋನ್ ರಿಂಗಣಿಸುತ್ತಿದೆ. ಅವರನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಕುಟುಂಬ ಒತ್ತಾಯಿಸಿದೆ. ನಾಲ್ಕು ದಿನಗಳ ಹಿಂದೆ ಅರ್ಜುನ್ ಲಾರಿ ಚಲಾಯಿಸಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡೆಯಿಂದ ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರ ಮರುಸ್ಥಾಪಿಸಲು ಅಧಿಕಾರಿಗಳು ಆದ್ಯತೆ ನೀಡಿದ್ದಾರೆ. ಆದರೆ ಲಾರಿ ಹಾಗೂ ಚಾಲಕ ಮಣ್ಣಿನಡಿಯಲ್ಲಿ ಸಿಲುಕಿಕೊಂಡ ವಿಷಯ ಅನಂತರವೇ ಗಮನಕ್ಕೆ ಬಂದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಪಿಎಸ್ ವ್ಯವಸ್ಥೆ ಉಪಯೋಗಿಸಿ ನಡೆಸಿದ ಶೋಧ ವೇಳೆ ಲಾರಿ ಮಣ್ಣಿನಡಿಯಲ್ಲಿ ರುವುದಾಗಿ ದೃಢೀಕರಿಸಲಾಗಿದೆ. ಅರ್ಜುನ್‌ರನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಪತ್ನಿ ಕೃಷ್ಣಪ್ರಿಯಾ ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಸ್ಪಂದಿಸಿದ್ದು ಕರ್ನಾಟಕದ ಅಧಿಕಾರಿಗಳನ್ನು ಸಂಪರ್ಕಿಸಲು ಕ್ರಮ ಕೈಗೊಂಡಿದ್ದಾರೆ.