ಕರ್ನಾಟಕ ಮದ್ಯ, ಬಿಯರ್ ವಶ: ಕಾರು ಸಹಿತ ಇಬ್ಬರ ಸೆರೆ
ಉಪ್ಪಳ: ಉಪ್ಪಳ ಪೇಟೆಯಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ 112.32 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಹಾಗೂ ೪೮ ಲೀಟರ್ ಬಿಯರ್ ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಒ. ವಿನೀತ್ ಪುರುಷೋತ್ತಮ (30) ಮತ್ತು ಅವಿನಾಶ್ ಒ. (27) ಎಂಬಿಬ್ಬರನ್ನು ಸೆರೆ ಹಿಡಿಯಲಾಗಿದೆ. ಮಾಲು ಸಾಗಿಸಲು ಬಳಸಲಾದ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ (ಗ್ರೇಡ್) ಮುರಳಿ ಕೆ.ರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್) ನೌಶಾದ್ ಕೆ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸತೀಶನ್ ಕೆ, ಮಂಜುನಾಥ ವಿ, ನಸರುದ್ದೀನ್, ಎ.ಕೆ. ಚಾಲಕ ಕ್ರಿಸ್ಟಿ ಪಿ.ಬಿ. ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಚರಣೆ ನಡೆಸಿದೆ.