ಕರ್ನಾಟಕ ಮದ್ಯ ವಶ
ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಖಾಸಗಿ ಬಸ್ಸೊಂದನ್ನು ತಪಾಸಣೆಗೊಳಪಡಿ ಸಿದಾಗ ಅದರಲ್ಲಿ ೪.೫ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಕೃಷ್ಣನಗರದ ತುಳಸೀಧರನ್ (43) ಎಂಬಾತನನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಎಕ್ಸೈಸ್ ಇನ್‌ಸ್ಪೆಕ್ಟರ್ ಜಿನು ಜೇಮ್ಸ್ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಎಇಐ ಗ್ರೇಡ್ ವಿನಯರಾಜ್, ಇತರ ಸಿಬ್ಬಂದಿಗಳಾದ ಜನಾರ್ದನ, ಪ್ರಭಾಕರನ್ ಒಳಗೊಂಡಿದ್ದರು.