ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಬದಿಯಡ್ಕ: ಬದಿಯಡ್ಕ ಎಕ್ಸೈಸ್ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿಷ್ಣು ಪಿ.ಆರ್.ರ ನೇತೃತ್ವದ ತಂಡ ಕಾಡಮನೆ ಎಂಬಲ್ಲಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 3.78 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಡು ಕೇಸು ದಾಖಲಿಸಿಕೊಂಡಿದೆ.ಇದಕ್ಕೆ ಸಂಬಂಧಿಸಿ ಕಂಕಣ್ಣಾರ್ ಎಂಬಲ್ಲಿ ವಾಸಿಸುವವಿನಯ್ ಕುಮಾರ್ ಎನ್.ಪಿ. ಎಂಬಾತನನ್ನು ಬಂಧಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಬಿಜೋಯ್ ಇ.ಕೆ., ಸಿಇಒಗಳಾದ ಶಾಲಿನಿ, ಲಿಜಿನ್ ಆರ್, ಟಿಪ್ಸನ್ ಟಿ.ಜಿ. ಮತ್ತು ಚಾಲಕ ಸಾಗರ್ ಎಂಬವರು ಒಳಗೊಂಡಿದ್ದಾರೆ.