ಕರ್ನಾಟಕ ಮದ್ಯ, ಹುಳಿರಸ ವಶ: ಓರ್ವ ಸೆರೆ
ಮಂಜೇಶ್ವರ: ಮಂಜೇಶ್ವರ ಮತ್ತು ಆದೂರು ಎಂಬೆಡೆಗಳಲ್ಲಾಗಿ ಅಬಕಾರಿ ತಂಡ ನಿನ್ನೆ ನಡೆಸಿದ ಎರಡು ಕಾರ್ಯಾಚರಣೆಗಳಲ್ಲಿ ಕರ್ನಾಟಕ ನಿರ್ಮಿತ ಮದ್ಯ ಮತ್ತು ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿ, ಸ್ಕೂಟರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದರಂತೆ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ರವೀಂದ್ರನ್ ಎ.ಕೆ. ಯವರ ನೇತೃತ್ವದ ಅಬಕಾರಿ ತಂಡ ಆದೂರು ಪೆರಿಯಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ಸಿದ್ಧಪಡಿಸಲೆಂದು ತಯಾರಿಸಲಾಗಿದ್ದ 6೦ ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಈ ಅಬಕಾರಿ ಕಾರ್ಯಾಚರಣೆಯಲ್ಲಿ ಐ.ಬಿ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೇಕಬ್ ಎಸ್, ಸಿಇಒಗಳಾದ ಮೋಹನ್ ಕುಮಾರ್ ಎಲ್, ಜನಾರ್ಧನನ್ ಎಸ್. ವಿನೋದ್ ಕೆ. ಮತ್ತು ಅಶ್ವತಿ ವಿ.ವಿ. ಎಂಬವರು ಒಳಗೊಂಡಿದ್ದರು.
ಇದೇ ರೀತಿ ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಸ್ಕೂಟರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ೮.೬೪ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಉಪ್ಪಳ ಬಂಗರ ಕಡಪ್ಪುರದ ಎನ್. ಗೋಪಾಲಕೃಷ್ಣ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಎಕ್ಸೈಸ್ ಇನ್ಸ್‌ಪೆಕ್ಟರ್ ಗಂಗಾಧರನ್ ಕೆ.ಪಿಯವರ ನೇತೃತ್ವದ ಪ್ರಿವೆಂಟೀವ್ ಆಫೀಸರ್ ಪ್ರತೀಷ್ ಕೆ.ಎಂ. ಮತ್ತು ಸಿಇಒ ವಿನೋದ್ ಬಿ. ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.