ಕರ್ಷಕ ಕಾಂಗ್ರೆಸ್‌ನಿಂದ ಮುಳಿಯಾರು ಕೃಷಿ ಭವನಕ್ಕೆ ಮಾರ್ಚ್, ಧರಣಿ
ಬೋವಿಕ್ಕಾನ: ತೆಂಗಿನಕಾಯಿ ಕೃಷಿಕರಿಗೆ ವಿಶ್ವ ಬ್ಯಾಂಕ್ ಮಂಜೂರು ಮಾಡಿದ 136 ಕೋಟಿ ರೂಪಾಯಿಗಳನ್ನು ಬೇರೆ ಅಗತ್ಯಕ್ಕೆ ಖರ್ಚು ಮಾಡಿರುವುದಾಗಿ ಆರೋಪಿಸಿ, ರಬ್ಬರ್‌ಗೆ 250 ರೂ. ಬೆಲೆ ಎಂಬ ಭರವಸೆಯನ್ನು ಪಾಲಿಸದ ಸರಕಾರದ ಕ್ರಮವನ್ನು ಪ್ರತಿಭಟಿಸಿ ಕರ್ಷಕ ಕಾಂಗ್ರೆಸ್ ಮುಳಿಯಾರು ಮಂಡಲದ ನೇತೃತ್ವದಲ್ಲಿ ಮುಳಿಯಾರು ಕೃಷಿ ಭವನಕ್ಕೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಕೃಷಿ ಬೆಳೆಗಳಿಗೆ ನಷ್ಟ ಪರಿಹಾರ ನೀಡಬೇಕು, ಸರಕಾರ ಕೃಷಿಕರೊಂದಿಗೆ ತೋರಿಸುವ ನಿರ್ಲಕ್ಷ್ಯ ನೀತಿಯನ್ನು ಕೊನೆಗೊಳಿ ಸಬೇಕೆಂದೂ ಒತ್ತಾಯಿಸಲಾಯಿತು. ಕರ್ಷಕ ಕಾಂಗ್ರೆಸ್ ಮುಳಿಯಾರು ಮಂಡಲ ಅಧ್ಯಕ್ಷ ಪಿ. ನಾರಾಯಣನ್ ನಾಯರ್‌ರ ಅಧ್ಯಕ್ಷತೆಯಲ್ಲ್ಲಿ ನಡೆದ ಧರಣಿಯನ್ನು ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್ ಉದ್ಘಾಟಿಸಿದರು. ಡಿಸಿಸಿ ಕಾರ್ಯದರ್ಶಿ ಕುಂಞಂಬು ನಂಬ್ಯಾರ್, ಟಿಕೆಡಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್, ಮುಳಿಯಾರು ಬ್ಲೋಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಣಿಕಂ
ಠನ್ ಓಂಬೈಲ್, ಕರ್ಷಕ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೇಣುಗೋ ಪಾಲನ್ ಇ, ಜಿಲ್ಲಾ ಕಾರ್ಯದರ್ಶಿ ಗಳಾದ ಇ. ಪವಿತ್ರಸಾಗರ್, ಕೇಳು ಮಣಿಯಾಣಿ ಪಾಟಿಕೊಚ್ಚಿ, ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ಕುಂಞಿರಾಮನ್ ಇರಿಯಣ್ಣಿ, ಮಂಡಲ ಕೋಶಾಧಿಕಾರಿ ಶಾಫಿ ಮೊದಲಾದವರು ಮಾತನಾಡಿದರು. ಕರ್ಷಕ ಕಾಂಗ್ರೆಸ್ ಮುಳಿಯಾರು ಮಂಡಲ ಕಾರ್ಯದರ್ಶಿ ಭಾಸ್ಕರನ್ ಪಾರೆಚ್ಚಾಲ್ ಸ್ವಾಗತಿಸಿ, ಉಮೇಶನ್ ಪಾಯಂ ವಂದಿಸಿದರು.