ಕಲೋತ್ಸವ ಮಧ್ಯೆ ಘರ್ಷಣೆ: ಓರ್ವ ವಿದ್ಯಾರ್ಥಿಗೆ ಗಂಭೀರ
ತೃಶೂರು: ಕಲ್ಲಿಕೋಟೆ ವಿವಿಯ ತೃಶೂರು ಜಿಲ್ಲಾ ಡಿಝೋನ್ ಕಲೋತ್ಸವದ ಮಧ್ಯೆ ವಿದ್ಯಾರ್ಥಿಗಳು ಪರಸ್ಪರ ಘರ್ಷಣೆ ನಿರತರಾದ ಹಿನ್ನೆಲೆಯಲ್ಲಿ ಕಲೋತ್ಸವವನ್ನು ರದ್ದುಪಡಿಸಲಾಗಿದೆ. ಗಲಾಟೆಯಲ್ಲಿ ಕೇರಳವರ್ಮ ಕಾಲೇಜು ಎಸ್‌ಎಫ್‌ಐ ಘಟಕ ಅಧ್ಯಕ್ಷ ಆಶಿಶ್‌ಗೆ ಗಂಭೀರ ಗಾಯ ಉಂಟಾಗಿದೆ. ಎಸ್‌ಎಫ್‌ಐ- ಕೆಎಸ್ ಯು ಕಾರ್ಯಕರ್ತರಾದ ಹಲವು ವಿದ್ಯಾ ರ್ಥಿಗಳಿಗೆ ಗಾಯ ಉಂಟಾಗಿದೆ. ಮಾಹಿತಿ ತಿಳಿದು ತಲುಪಿದ ಪೊಲೀಸರು ಅಕ್ರಮಿ ಗಳನ್ನು ಓಡಿಸಿದರು. ಆಶಿಶ್ ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೆಎಸ್‌ಯು ಜಿಲ್ಲಾ ಅಧ್ಯಕ್ಷ ಗೋಕುಲ್‌ರ ನೇತೃತ್ವದಲ್ಲಿ ಆಕ್ರಮಣ ನಡೆಸಿರುವುದಾಗಿ ಎಸ್‌ಎಫ್‌ಐ ಆರೋ ಪಿಸಿದೆ. ಆದರೆ ಆಕ್ರಮಣ ಆರಂಭಿಸಿರು ವುದು ಎಸ್‌ಎಫ್‌ಐ ಆಗಿದೆ ಎಂದು ಕೆಎಸ್‌ಯು ಆರೋಪಿಸಿದೆ.