ಕಲ್ಯಾಣ ಪಿಂಚಣಿ ವಂಚನೆ: ಕಂದಾಯ ಇಲಾಖೆಯ 16 ಸಿಬ್ಬಂದಿಗಳ ಅಮಾನತು ಕ್ರಮ ಹಿಂತೆಗೆತ

ತಿರುವನಂತಪುರ: ಬಡ ಕುಟುಂಬದ ವಯೋಜನರಿಗಾಗಿ ವಿತರಿಸಲಾಗುತ್ತಿರುವ ಸಾಮಾಜಿಕ ಪಿಂಚಣಿಯನ್ನು ಅನಧಿಕೃತವಾಗಿ  ಪಡೆದ ಆರೋಪದಂತೆ ಸರಕಾರಿ ಸೇವೆಯಿಂದ ಅಮಾನತುಗೊಳಿ ಸಲ್ಪಟ್ಟ ರಾಜ್ಯ ಕಂದಾಯ ಸರ್ವೇ ವಿಭಾಗದ ಸಿಬ್ಬಂದಿಗಳ ಮೇಲಿನ ಅಮಾನತು  ಕ್ರಮವನ್ನು  ಹಿಂತೆಗೆದು ಕೊಂಡು ಅವರನ್ನು ಮತ್ತೆ ಸರಕಾರಿ ಸೇವೆಗೆ ಸೇರ್ಪಡೆಗೊಳಿಸುವ ಕ್ರಮ ಸರಕಾರ ಆರಂಭಿಸಿದೆ.  ಅನಧಿಕೃತ ವಾಗಿ ಕಲ್ಯಾಣ ಪಿಂಚಣಿ ಪಡೆದ ಆರೋಪದಂತೆ ಕಂದಾಯ ಇಲಾಖೆಯ 38 ಸಿಬ್ಬಂದಿಗಳನ್ನು ಇತ್ತೀಚೆಗೆ ಸೇವೆಯಿಂದ ಅಮಾನತು ಗೊಳಿಸಲಾಗಿತ್ತು. ಆ ಪೈಕಿ 16 ಮಂದಿ ಯ ಅಮಾನತು ಕ್ರಮವನ್ನು ಕಂದಾ ಯ ಇಲಾಖೆ ಈಗ ಹಿಂತೆಗೆದುಕೊಂಡಿದೆ.

ಅನರ್ಹವಾಗಿ ಪಡೆದ ಪಿಂಚಣಿ ಮೊತ್ತವನ್ನು ಶೇ. 18ರಷ್ಟು ಬಡ್ಡಿ ಸಹಿತ ಇವರಿಂದ ಮರು ವಸೂಲಿ ಮಾಡಲಾಗಿದೆ. ಆ ಮೂಲಕ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ.ಇದೇ ರೀತಿ ವಿವಿಧ ಇಲಾಖೆಗಳಿಗೆ ಸೇರಿದ 700ರಷ್ಟು  ಮಂದಿ  ಸರಕಾರಿ ಸಿಬ್ಬಂದಿಗಳು ಅನಧಿಕೃತವಾಗಿ ಸಮಾಜ ಕಲ್ಯಾಣ ಪಿಂಚಣಿ ಪಡೆದಿರುವುದನ್ನು ಪತ್ತಹಚ್ಚಲಾಗಿದೆ. ಹೀಗೆ  ಅವರು ಪಡೆದ  ಒಟ್ಟು ಪಿಂಚಣಿ ಮೊತ್ತವನ್ನು ಶೇ. 18ರಷ್ಟು ಬಡ್ಡಿ ಸಹಿತ ವಸೂಲಿ ಮಾಡುವ ಕ್ರಮ ಸರಕಾರ ಆರಂಭಿಸಿದೆ. ಹೀಗೆ ಹಣ ಮರುಪಾವ ತಿಸಿದವರ ಮೇಲಿನ ಅಮಾನತು ಕ್ರಮ ಹಿಂತೆಗೆದುಕೊಳ್ಳಲು ಸರಕಾರ ಮುಂದಾಗಿದೆ

You cannot copy contents of this page