ಕಲ್ಯೋಟ್: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಅವಳಿ ಕೊಲೆ ಪ್ರಕರಣ ; ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣ
ಕಾಸರಗೋಡು: ಇಡೀ ರಾಜ್ಯವನ್ನೇ ನಡುಗಿಸಿದ್ದ ಪೆರಿಯಾ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರು ಆಗಿದ್ದ ಶರತ್ಲಾಲ್ (23) ಮತ್ತು ಕೃಪೇಶ್ (19)ರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಎರ್ನಾಕುಳಂನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಇದರಿಂದಾಗಿ ಈ ಕೊಲೆ ಪ್ರಕರಣದ ತೀರ್ಪು ಶೀಘ್ರ ಹೊರ ಬರಲಿದೆ.
2019 ಫೆಬ್ರವರಿ 17ರಂದು ರಾತ್ರಿ 7.45ರ ವೇಳೆಗೆ ಪೆರಿಯಾ ಕಲ್ಯೋಟ್ನಲ್ಲಿ ಕೃಪೇಶ್ ಮತ್ತು ಶರತ್ಲಾಲ್ರನ್ನು ಕಡಿದು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಈ ಕೊಲೆ ಪ್ರಕರಣದ ಬಗ್ಗೆ ಮೊದಲು ಬೇಕಲ ಪೊಲೀಸರು ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಕ್ರೈಮ್ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಈ ಕೊಲೆ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲವೆಂದು ಆದ್ದರಿಂದ ಇದರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆAದು ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಮನೆಯವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ಹೈಕೋರ್ಟ್ ನಂತರ ನೀಡಿದ ನಿರ್ದೇಶ ಪ್ರಕಾರ ಈ ಕೊಲೆ ಪ್ರಕರಣದ ತೀರ್ಪನ್ನು ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಸಿಬಿಐ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಎರ್ನಾಕುಳಂನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾಜ್ಶೀðಟ್ ಸಲ್ಲಿಸಿತ್ತು. ಈ ಕೊಲೆ ಪ್ರಕರಣದಲ್ಲಿ ಒಟ್ಟು 24 ಆರೋಪಿಗಳು ಒಳಗೊಂಡಿದ್ದರು.
ಸಿಪಿಎA ಪೆರಿಯ ಲೋಕಲ್ ಸಮಿತಿ ಸದಸ್ಯರಾಗಿದ್ದ ಪೀತಾಂಭರನ್, ಸಜಿ ಜೋರ್ಜ್ , ಸುರೇಶ್, ಅನಿಲ್, ಗಿಜಿನ್ ಗಂಗಾಧರನ್, ಅಶ್ವಿನ್, ಶ್ರೀರಾಜ್, ಸುಭೀಶ್, ಮುರಳಿ, ರಂಜಿತ್, ಪ್ರದೀಪ್- ಕುಟ್ಟನ್, ಮಣಿಕಂಠನ್, ಹೊಸದುರ್ಗ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಸಿಪಿಎಂ ಪೆರಿಯಾ ಲೋಕಲ್ ಸಮಿತಿ ಕಾರ್ಯದರ್ಶಿ ಬಾಲಕೃಷ್ಣನ್, ಸುರೇಂದ್ರನ್, ಶಾಸ್ತ ಮಧು, ಹರಿಪ್ರಸಾದ್, ಮಾಜಿ ಶಾಸಕ ಕೆ.ಪಿ. ಕುಂuಟಿಜeಜಿiಟಿeಜರಾಮನ್, ರಜಿ ವರ್ಗೀಸ್ ಮತ್ತು ರಾಜೇಶ್ ಯಾನೆ ರಾಜ ಮೊದಲಾದವರು ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಆರೋಪಿಗಳ ಪೈಕಿ ಒಂದರಿAದ 11ರ ತನಕದ ಆರೋಪಿಗಳನ್ನು ಆರೂವರೆ ವರ್ಷಗಳ ಹಿಂದೆ ಬಂಧಿಸಲಾಗಿತ್ತು. ಅಂದಿನಿAದ ಈ ತನಕ ಅವರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲೇ ಕಳೆಯುತ್ತಿದ್ದಾರೆ. ಇತರ ಆರೋಪಿಗಳಾದ ಮಣಿಕಂಠನ್ ಸೇರಿದಂತೆ ಮೂವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಸಿಬಿಐ ಪರ ಸ್ಪೆಷಲ್ ಪ್ರೋಸಿಕ್ಯೂಟರ್ ಬೋಬಿ ಜೋಸೆಫ್ ಮತ್ತು ಅಸಿಸ್ಟೆಂಟ್ ಪ್ರೋಸಿಕ್ಯೂಟರ್ ನ್ಯಾ. ಕೆ. ಪದ್ಮನಾಭನ್ ನ್ಯಾಯಾಲಯದಲ್ಲಿ ವಾದಿಸಿದರು.