ಕಳವಿಗಾಗಿ ತಲುಪಿದ ಕಳ್ಳ ಏನೂ ಲಭಿಸದ ನಿರಾಶೆಯಲ್ಲಿ ನಿದ್ರಿಸುತ್ತಿದ್ದ ಯುವತಿಗೆ ಚುಂಬಿಸಿ ಪರಾರಿ

ಮುಂಬೈ: ಕಳವುಗೈಯ್ಯಲು ತಲುಪಿದ ಕಳ್ಳ ಅಲ್ಲಿಂದ ಏನೂ ಲಭಿಸದೆ ನಿರಾಸೆಯಿಂದ ಮನೆಯಲ್ಲಿ ನಿದ್ರಿಸುತ್ತಿದ್ದ ಯುವತಿಯನ್ನು ಚುಂಬಿಸಿದ ಬಳಿಕ ಪರಾರಿಯಾಗಿದ್ದು, ಈತನನ್ನು ಸೆರೆಹಿಡಿಯಲಾಗಿದೆ. ಮುಂಬೈಯ ಮಲಾಡಿಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕಳವುಗೈಯ್ಯುವ ಉದ್ದೇಶದೊಂದಿಗೆ  ಕಳ್ಳ ಯುವತಿ ವಾಸಿಸುತ್ತಿದ್ದ ಮನೆಗೆ ನುಗ್ಗಿದ್ದನು. ಆದರೆ ಕಳವುಗೈಯ್ಯಲು ಅಲ್ಲಿಂದ ಏನೂ ಲಭಿಸಿರಲಿಲ್ಲ. ಬಳಿಕ  ಅಲ್ಲಿ ನಿದ್ರಿಸುತ್ತಿದ್ದ ೩೮ರ ಹರೆಯದ ಯುವತಿಯನ್ನು ನೋಡಿದ್ದಾನೆ. ಕ್ಷಣದಲ್ಲಿ ಆಕೆಯನ್ನು ಬಲವಾಗಿ ಹಿಡಿದು ಚುಂಬಿಸಿ ಪರಾರಿಯಾಗಿದ್ದಾನೆ. ಈಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ನಡೆಸಿದ ತನಿಖೆಯಲ್ಲಿ ಆರೋ ಪಿಯನ್ನು ಸೆರೆಹಿಡಿಯಲಾಗಿದೆ. ಈತನ ವಿರುದ್ಧ  ಈ ಹಿಂದೆ ಅಪರಾಧ ಪ್ರಕರಣಗಳು ದಾಖಲಾಗಿಲ್ಲವೆಂದು, ಕುಟುಂಬ ಸಮೇತ ವಾಸಿಸುತ್ತಿರುವ ಈತ ನಿರುದ್ಯೋಗಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page